ಇದೆಂಥಾ ದೇಶಪ್ರೇಮ ರೀ?

Author : ಎಸ್. ಶಿಶಿರಂಜನ್

Pages 100

₹ 80.00




Published by: ಸ್ಕಂದ ಪ್ರಕಾಶನ
Address: ಮೈಸೂರು
Phone: 9535802512

Synopsys

ಇತಿಹಾಸದ ಪ್ರಸಂಗವೊಂದನ್ನು ಮುಂದಿಟ್ಟುಕೊಂಡು ಇಂದಿನ ಭಾರತೀಯರ ಮನಸ್ಥಿತಿಯನ್ನು ವ್ಯಂಗ್ಯವಾಡುವ ಪ್ರಯತ್ನವನ್ನು ನಾಟಕಕಾರರು ಈ ಕೃತಿಯಲ್ಲಿ ಮಾಡಿದ್ದಾರೆ. ಚಿತ್ರದಲ್ಲಿ ಇತಿಹಾಸದ ಒಂದು ಸಣ್ಣ ಎಳೆಯಿದೆ. ತನ್ನ ಗಂಡ ದೇಶದ್ರೋಹವನ್ನು ಮಾಡಿ ಶತ್ರುಗಳ ಜೊತೆ ಕೈ ಜೋಡಿಸಿದಾಗ, ಪತ್ನಿ ಹೊನ್ನವ್ವ ಆತನ ಊಟದಲ್ಲಿ ವಿಷ ಇಕ್ಕಿ, ತಾನೂ ವಿಷ ಉಂಡು ಸಾಯುವುದು. ಈ ದೇಶಪ್ರೇಮದ ಕತೆಯನ್ನು ಮುಂದಿಟ್ಟುಕೊಂಡು ಇಂದಿನ ದೇಶದ ವರ್ತಮಾನವನ್ನು ಚರ್ಚಿಸುವುದು. ರಾಷ್ಟ್ರೀಯತೆಯ ಆಶಯವೂ ಇದರಲ್ಲಿದೆ. ಅಂತೆಯೇ ಪ್ರಜಾಪ್ರಭುತ್ವವನ್ನು ಅಲ್ಲಲ್ಲಿ ವ್ಯಂಗ್ಯ ಮಾಡುತ್ತದೆ. ಸುಭಾಶ್ ಚಂದ್ರಬೋಸ್, ಭಗತ್ ಸಿಂಗ್‌ರಂತಹ ವ್ಯಕ್ತಿತ್ವಕ್ಕಾಗಿ ನಾಟಕಕಾರರು ಹಪಹಪಿಸುತ್ತಾರೆ. ಆದರೆ ಈ ದೇಶದ ಮೂಲಭೂತ ಸಾಮಾಜಿಕ ಸಮಸ್ಯೆಗಳ ಕಡೆಗೆ ಕಣ್ಣಾಯಿಸುವುದಿಲ್ಲ. ಆದುದರಿಂದ ಇದೊಂದು ರೀತಿಯ ರಾಜಕೀಯ ನಾಟಕವೇ ಸರಿ. ಜಾತೀಯತೆ, ರೈತರ ಸಮಸ್ಯೆ, ಕೃಷಿಯ ಪತನ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಸೋಗಲಾಡಿತನ ಇವುಗಳೆಲ್ಲವೂ ದೇಶಪ್ರೇಮಕ್ಕಿರುವ ಅಡೆತಡೆಗಳು ಎನ್ನುವ ಆಳದ ನೋಟ ಈ ನಾಟಕದಲ್ಲಿಲ್ಲ. ಭಾವಾವೇಶಕ್ಕೊಳಗಾಗಿರುವ ಜನಪ್ರಿಯ ಆದರ್ಶವೇ ನಾಟಕಕಾರರ ಮುಖ್ಯ ಉದ್ದೇಶವಾಗಿದೆ.

About the Author

ಎಸ್. ಶಿಶಿರಂಜನ್
(05 March 1989)

’ಶಿಶಿರ’ ಕಾವ್ಯನಾಮದ ಮೂಲಕ ಹೆಸರಾಗಿರುವ ಎಸ್.ಶಿಶಿರಂಜನ್ ಜನಿಸಿದ್ದು 1989 ಮಾರ್ಚ್ 5 ರಂದು ಮೈಸೂರಿನ ದೊಡ್ಡಮಾರಗೌಡನಹಳ್ಳಿಯಲ್ಲಿ. ತಂದೆ ಶಂಕರನಾರಾಯಣ, ತಾಯಿ ಲಲಿತ.  ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಕೃತಿಗಳೆಂದರೆ ಸಂವೇದನೆ(ಕವನ ಸಂಕಲನ), ಇದೆಂಥಾ ದೇಶಪ್ರೇಮ ರೀ?! (ನಾಟಕ), ಅವ್ವ(ಹನಿಗವಿತೆಗಳು), ಲಂಕೇಶನ ತಲೆಗಳು(ಖಂಡಕಾವ್ಯ). ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿ, ರಂಗ ಪ್ರತಿಭಾ ಸನ್ಮಾನ ಹಾಗೂ ಸ್ಪಂದನಶ್ರೀ ಪ್ರಶಸ್ತಿ ಲಭಿಸಿದೆ. ...

READ MORE

Related Books