ಗಿರೀಶ ಕಾರ್ನಾಡರ ’ಹಯವದನ’ ಕನ್ನಡ ಮತ್ತು ಭಾರತೀಯ ರಂಗಭೂಮಿಯ ಮಹತ್ವದ ಕೃತಿಗಳಲ್ಲಿ ಒಂದು. ಸಂಗೀತ-ಹಾಡು-ನೃತ್ಯ-ಅಭಿನಯಗಳನ್ನು ಒಳಗೊಂಡ ಈ ನಾಟಕ ಬ್ರೆಕ್ಟ್ ನ ಎಪಿಕ್ ಥಿಯೇಟರ್‌ನ ಪರಿಕಲ್ಪನೆಗೆ ಅನುಗುಣವಾಗಿ ರಚಿತಗೊಂಡಿದೆ.
ದೇಹ ಮತ್ತು ಬುದ್ಧಿ-ಮನಸ್ಸುಗಳ ನಡುವಿನ ಮುಖಾಮುಖಿಯನ್ನು ಗಿರೀಶ ಈ ನಾಟಕದಲ್ಲಿ ಸೊಗಸಾಗಿ ಮಾಡಿದ್ದಾರೆ. ಕಪಿಲ ಮತ್ತು ದೇವದತ್ತ ಇಬ್ಬರು ಸ್ನೇಹಿತರು. ದೇವದತ್ತನ ಪತ್ನಿ ಪದ್ಮಿನಿ ಕಥಾನಾಯಕಿ. ಮನುಷ್ಯನ ಅಪೂರ್ಣತೆಯನ್ನು ಕುರಿತ ಈ ನಾಟಕದಲ್ಲಿನ ನಾಟಕೀಯ ದೃಶ್ಯಗಳು- ಸೊಗಸಾದ ಹಾಡು-ಕತೆ ಕಟ್ಟುವ ಕ್ರಮ ಮೆಚ್ಚುಗೆಗೆ ಪಾತ್ರವಾಗದೇ ಇರದು.
ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ, ಕತ್ತಿಯ ಗಾಯ ಮಾಡಲಿಕ್ಕಾಗೊದಿಲ್ಲ ಎಂಬ ಹಾಡು ’ಹಯವದನ’ ನಾಟಕದ ವಿಶೇಷ. ನಾಟಕದ ಆರಂಭದಲ್ಲಿಯೇ ಅಪೂರ್ಣತೆಯನ್ನು ಸೂಚಿಸುವ ಗಣೇಶ ಪ್ರಾರ್ಥನೆ ನಾಟಕಕ್ಕೆ ಉತ್ತಮ ಆರಂಭ ಒದಗಿಸುತ್ತದೆ.
©2024 Book Brahma Private Limited.