ಕಾಡಿನಲ್ಲಿಯ ಜನ ತಮ್ಮನ್ನು ಬದುಕಿಸಿಕೊಳ್ಳುವುದರ ಜೊತೆಗೆ ಸುತ್ತಲಿನ ಪರಿಸರವನ್ನು ಹೇಗೆ ಉಳಿಸಿಕೊಳ್ಳುತ್ತಾರೆ? ನಾಗರಿಕ ಸಮಾಜ ಕಾಡನ್ನು ಹಾಗೂ ಅಲ್ಲಿಯ ಜನರನ್ನು ಗಂಭೀರವಾಗಿ ತೆಗೆದುಕೊಂಡು ಅವರನ್ನು ಉಳಿಸುವುದರ ಜತೆಗೆ ತಾವು ಉಳಿದುಕೊಳ್ಳಬೇಕು ಎಂಬ ಅಂಶವಿರುವ ನಾಟಕ 'ಗೊರುಕನ 1974'.
ಪ್ರಕೃತಿ ವಿಕೋಪಗಳು ಏಕೆ ಉಂಟಾಗುತ್ತಿವೆ? ಎಂಬ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹಾಗಾಗದಂತೆ ಬದುಕುವುದು ಮುಖ್ಯ ಎಂದು ಹೇಳುವುದು ಇಂದಿನ ಅಗತ್ಯವೆನಿಸುತ್ತದೆ. ಅಂತಹ ಪ್ರಯತ್ನವನ್ನು ಲೇಖಕರು ಈ ಕೃತಿಯ ಮೂಲಕ ಮಾಡಿದ್ದಾರೆ. ಮದುವೆಯ ಬಗ್ಗೆ ನಾಟಕದಲ್ಲಿ ಚರ್ಚಿಸುತ್ತಾ, ಹೆಣ್ಣು ಗಂಡುಗಳ ಆಯ್ಕೆ, ಅವರ ಅನ್ಯೋನ್ಯ ಸಂಬಂಧ ಬೆಳೆಸುವ ಬಗ್ಗೆ ಆತ್ಮೀಯವಾಗಿ ಮೂಡಿಸಿದ್ದಾರೆ. ಪರಿಸರದ ಹಸಿರಿನ ಉಳಿವು ಹಾಗೂ ಈ ಮಧ್ಯೆ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದರ ಕುರಿತು ಈ ಕೃತಿಯು ಅರಿವು ಮೂಡಿಸುತ್ತದೆ.
©2024 Book Brahma Private Limited.