ಗೋಲ್

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 48

₹ 40.00




Year of Publication: 2008
Published by: ದ.ರಾ. ಬೇಂದ್ರೆ ಸಂಶೋಧನ ಸಂಸ್ಥೆ, ಹುಬ್ಬಳ್ಳಿ

Synopsys

ಅಂಬಿಕಾತನಯದತ್ತ' ಎಂದು ಜನಪ್ರಿಯರಾಗಿರುವ ಕವಿ ಬೇಂದ್ರೆಯವರು ನಾಟಕಕಾರರು ಕೂಡ. ಬೇಂದ್ರೆಯವರ ಹದಿನಾಲ್ಕು ನಾಟಕಗಳ ಪೈಕಿ ಮೊದಲನೆಯದು 'ಗೋಲ್'. ಬೇಂದ್ರೆಯವರು ಈ ನಾಟಕವನ್ನು 1920ರಲ್ಲಿ ‘ಗೆಳೆಯ ಶಂಕರಗೌಡ’ರಿಗಾಗಿ ರಚಿಸಿದೆ ಎಂದು ಹೇಳಿದ್ದಾರೆ. 34 ಪುಟಗಳಲ್ಲಿ ಇರುವ ಗೋಲ್ ನಾಟಕದಲ್ಲಿ ಒಟ್ಟು ನಾಲ್ಕು ದೃಶ್ಯಗಳಿವೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬೇಂದ್ರೆಯವರು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಅವರ ಜೊತೆಗೆ ರಂ.ಶ್ರೀ.ಮುಗಳಿ, ವಿ.ಕೃ.ಗೋಕಾಕ, ಜಿ.ಬಿ. ಜೋಶಿ ಮುಂತಾದ ಗೆಳೆಯರಿದ್ದರು. ಈ ಗೆಳೆಯರು ಪರಸ್ಪರ ಮಾತುಗಾರಿಕೆಗೆ ಹೆಸರಾದವರು. ಹೀಗೆ ಮಾತಿನ ಮಧ್ಯೆ ಹುಟ್ಟಿಕೊಂಡ ನಾಟಕವೇ ಗೋಲ್. ಕರ್ನಾಟಕ ಕಾಲೇಜಿನ ಸ್ನೇಹ ಸಮ್ಮೇಲನದಲ್ಲಿ ಇದು ಮೊದಲ ಬಾರಿಗೆ ಪ್ರದರ್ಶನ ಕಂಡಿತು. ರಂಗನಾಯಕನ ಪಾತ್ರವನ್ನು ಮುಗಳಿ ಅವರು ಹಾಗೂ ಮತ್ತೊಂದು ಪಾತ್ರವನ್ನು ಜಿ.ಬಿ. ಜೋಶಿ ಅವರು ವಹಿಸಿದ್ದರು ಎಂದು ಬೇಂದ್ರೆಯವರು ಸ್ಮರಿಸಿದ್ದಾರೆ. 1921ರಲ್ಲಿ ಈ ನಾಟಕ ಮೊದಲ ಪ್ರಯೋಗ ಕಂಡಿತ್ತು. ಗೋಲ್ ನಾಟಕವು ಮೂರು ಆವೃತ್ತಿಗಳನ್ನು ಕಂಡಿದೆ. 'ಗೋಲ್' ಎಂದರೆ 'ಗುರಿ'. ಜೀವನದಲ್ಲಿ ಕುರಿಯಂತೆ ದಾರಿ ಹಿಡಿಯುವವರು ಬಹಳ. ಆದರೆ ಗುರಿಯ ದಾರಿಯಿಂದ ನಡೆಯುವವರು ಬಹಳ ಕಡಿಮೆ’ ಎಂದು ಬೇಂದ್ರೆಯವರು ’ಲೇಖಕರ ನುಡಿ'ಯಲ್ಲಿ ತಿಳಿಸಿದ್ದಾರೆ. ಪುಣೆಯ ಕಾಲೇಜಿನಲ್ಲಿ ಓದುತ್ತಿರುವಾಗಲೇ ಅರವಿಂದರ ಪ್ರಭಾವಕ್ಕೆ ಒಳಗಾಗಿದ್ದ ಬೇಂದ್ರೆಯವರು ಶ್ರೀಅರವಿಂದರ 'Thoughts and Glimpses Aphorisons' ಎಂಬ ಪುಸ್ತಕದಲ್ಲಿಯ 'The Goal' ಎಂಬ ಲೇಖನದಿಂದ ಪ್ರೇರಿತರಾಗಿದ್ದರು. ಗೋಲ್ ಏಕಾಂಕ ನಾಟಕದಲ್ಲಿ ಏಳು ಪಾತ್ರಗಳಿವೆ. ಪ್ರತಿ ಪಾತ್ರವೂ ಸಮಾಜದಲ್ಲಿರುವ ವಿವಿಧ ಬಗೆಯ ಯುವಕರ ಮನಸ್ಥಿತಿಯನ್ನು ನೀಡುತ್ತದೆ. ನಾಟಕದ ಮೊದಲ ಪ್ರವೇಶದ ಆದಿಗೆ 'ಗರಿ' ಕವನ ಸಂಕಲನದಲ್ಲಿಯ 'ಕವನ' ಸೇರಿಸಲಾಗಿದೆ. ಹಾಗೆಯೇ, ನಾಲ್ಕನೆಯ ಪ್ರವೇಶದ ಕೊನೆಯಲ್ಲಿ ’ಯಕ್ಷ-ಯಕ್ಷಿ' ಸಂಕಲನದ ಸೂಕ್ತಿ ಸೇರಿಸಿದ್ದಾರೆ. 'ಗೋಲ್' ನಾಟಕದ ನಾಯಕ ರಂಗನಾಯಕ. ಕಾಲೇಜು ವಿದ್ಯಾಭ್ಯಾಸ ಮುಗಿಸಿಕೊಂಡು ಹೊರಟ ರಂಗನಾಯಕನಿಗೆ ಅವನ ಗೆಳೆಯರು ಬೀಳ್ಕೊಡುಗೆ ಏರ್ಪಡಿಸುತ್ತಾರೆ. ಶ್ರೀಮಂತ ಮನೆತನಕ್ಕೆ ಸೇರಿದ್ದರೂ ರಂಗನಾಯಕ ಹಲವು ಸಮಸ್ಯೆಗಳ ಸುಳಿಗೆ ಸಿಲುಕಿದ್ದ. ಆದುದರಿಂದ ಅವನಿಗೆ ವಿಲಾಸದ ಜೀವನದಲ್ಲಿ ಆಸಕ್ತಿ ಇರಲಿಲ್ಲ. 'ಗೋಲ್'ನಲ್ಲಿ ಬೇಂದ್ರೆಯವರು ಪ್ರತಿಯೊಬ್ಬರ ಜೀವನಕ್ಕೊಂದು ಗುರಿ ಬೇಕು. ಆ ಗುರಿಯು ಆ ವ್ಯಕ್ತಿಯ ಆದರ್ಶವಾಗಿರಬೇಕು ಎಂಬ ಧೋರಣೆಯಿಂದ ಅದನ್ನೇ ನಾಟಕದ ವಸ್ತುವನ್ನಾಗಿ ಮಾಡಿದ್ದಾರೆ.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Related Books