ವಿಜಯಾ ಸುಬ್ಬರಾಜ್ ಅವರ ’ದಂಗೆ ಎದ್ದವಳು’ ನಾಟಕ ಹದಿನಾಲ್ಕು ದೃಶ್ಯಗಳಲ್ಲಿ ಹರಡಿಕೊಂಡ ಕಥಾ ವಿನ್ಯಾಸವನ್ನು ಹೊಂದಿದೆ. ಒಂದು ಕಡೆ, ವಿಕ್ರಮ ರಾಯನ ರಾಜ ಪರಿವಾರ: ಇನ್ನೊಂದು ಕಡೆ ಮಲ್ಲನ ಗೌಡನ ಪ್ರಜಾ ಪರಿವಾರ, ನಡುವಿನ ಕೊಂಡಿಯಾಗಿ ಗೌಡರ ಮಗಳು 'ಮಾದೇವಿ' ಅವಳೇ ಈ ನಾಟಕದ ಕ್ರಿಯಾ ಬಿಂದು. ಭಾಗವತ ಮೇಳ, ಪ್ರೇಕ್ಷಕರು, ಪ್ರಾರ್ಥನೆ... ಹೀಗೆ ಸಾಂಪ್ರದಾಯಿಕ ಎನ್ನಬಹುದಾದ ಚೌಕಟ್ಟಿನಲ್ಲಿಯೇ ನಾಟಕದ ಪ್ರಾರಂಭ, ಆಶಯ ಕೂಡ ನಮ್ಮ ಜಾನಪದ ಕತೆಗಳದೇ. ನಾಡಿಗೆ ವಿಪತ್ತು ಬಂದಾಗ 'ಬಲಿ' ಕೊಡುವುದು. ಈ “ಬಲಿ” ಕೂಡ ಆಸಕ್ತ ಶಕ್ತಿಗಳ ಕಾರಸ್ಥಾನದ ಫಲವೇ, 'ಬಲಿ' ಯಾದ ವ್ಯಕ್ತಿ ದೈವೀ ಪಟ್ಟಕ್ಕೆ ಏರುವುದು ಮಾಮೂಲಿ. ಈ ನಾಟಕದ ವೈಶಿಷ್ಟ್ಯ ಇರುವುದು ಈ ಬಲಿದಾನದ ಪ್ರಕ್ರಿಯೆಯಲ್ಲಿ ವಿಜಯಾ ಅವರು ಮಾಡಿಕೊಂಡಿರುವ ಬದಲಾವಣೆಯಲ್ಲಿ, ಮಾದೇವಿ ಕೇವಲ ಹರಕೆಯ ಕುರಿಯಾಗದೆ ಎಚ್ಚೆತ್ತ ಮಹಿಳೆಯ ಧ್ವನಿಯಾಗುತ್ತಾಳೆ, ಶೋಷಕ ಸಮಾಜಕ್ಕೆ ನೇರವಾಗಿ ಸವಾಲು ಹಾಕುವ ಮೂಲಕ ದಂಗೆ ಏಳುತ್ತಾಳೆ. ಮೂಕ ಪ್ರಜೆಗಳಿಗೆ ಬಾಯಿ ಆಗುತ್ತಾಳೆ ಎನ್ನುವುದು ಇಲ್ಲಿಯ ಕಥಾ ವಸ್ತು.
©2024 Book Brahma Private Limited.