ಟೈಬೀರಿಯಸ್

Author : ಕೆ.ವಿ. ತಿರುಮಲೇಶ್‌

Pages 176

₹ 150.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕವಿ ತಿರುಮಲೇಶರು ರಚಿಸಿದ ಮೊದಲ ನಾಟಕ 'ಟೈಬೀರಿಯಸ್'. ಇದರ ವಸ್ತು ರೋಮನ್ ಸಾಮ್ರಾಜ್ಯದ ಎರಡನೆಯ ರಾಜನಾದ ಟೈಬೀರಿಯಸ್ ಕ್ಲಾಡಿಯಸ್ ನೀರೋ (ಕ್ರಿ.ಪೂ. 42–ಕ್ರಿ.ಶ. 37). ಕೆಲವು ಶತಮಾನಗಳ ಕಾಲ ಗಣರಾಜ್ಯವಾಗಿದ್ದ ರೋಮ್ ಜೂಲಿಯಸ್ ಸೀಸರನ ಕಾಲದಲ್ಲಿ ಸಾಮ್ರಾಜ್ಯಶಾಹಿಯ ಕಡೆಗೆ ವಾಲಿತು. ಸೀಸರನ ನಂತರ ಬಂದ ಒಕ್ಟೇವಿಯಸ್ ಆಗಸ್ಟಸ್ (ಕ್ರಿ.ಪೂ. 63-ಕ್ರಿ.ಶ. 14) ರೋಮನ್ ಸಾಮ್ರಾಜ್ಯದ ನಿಜವಾದ ಸ್ಥಾಪಕ; ಇವನು ಕ್ರಿ.ಪೂ. 27ರಿಂದ ಕ್ರಿ.ಶ. 14ರತನಕ ರಾಜ್ಯಭಾರ ಮಾಡಿದ. ಆಗಸ್ಟಸ್ ಬಹಳ ಜನಪ್ರಿಯ ರಾಜನಾಗಿದ್ದ, ರೋಮನ್ನು ತಳದಿಂದ ಕಟ್ಟಿದವನೇ ಆಗಸ್ಟಸ್, I found Rome, a city of bricks and let it a city of marbles ಎನ್ನುವುದು ಅವನದೊಂದು ಪ್ರಸಿದ್ದ ಮಾತು. ಆಗಸ್ಸಸ್‌ಗೆ ಗಂಡು ಸಂತಾನ ಇರಲಿಲ್ಲ. ಆದ್ದರಿಂದ ಅವನು ತನ್ನ ಪತ್ನಿ ಲಿವಿಯಾ ಅವಳ ಮೊದಲ ಗಂಡನಿಂದ ಪಡೆದ ಟೈಬೀರಿಯಸ್‌ನ್ನ ದತ್ತು ಪುತ್ರನನ್ನಾಗಿ ಸ್ವೀಕರಿಸಿಕೊಳ್ಳುತ್ತಾನೆ. ಆಗಸ್ಟಸ್ ತನ್ನ 75ನೇ ವಯಸ್ಸಿನಲ್ಲಿ ತೀರಿಕೊಂಡ. ಅದು ನೈಸರ್ಗಿಕ ಕಾರಣಗಳಿಂದ ಇರಬಹುದು; ಆದರೂ ಅದೊಂದು ಕೊಲೆಯಾಗಿರಬಹುದು ಎಂಬ ಶಂಕೆ ಆಗಿನ ಕಾಲದ ಜನರಲ್ಲಿ ಇತ್ತು. ಸಂಶಯದ ಸೂಜಿ ಲಿವಿಯಾಳ ಕಡೆ ತಿರುಗಿತ್ತು. ಪಟ್ಟಕ್ಕೆ ಬಂದಾಗ ಟೈಬೀರಿಯಸ್‌ಗೆ ವಯಸ್ಸು ಐವತ್ತೈದು ದಾಟಿತ್ತು. ಈಗಾಗಲೇ ಅವನು ಹಲವು ಯುದ್ಧಗಳಲ್ಲಿ ಜಯ ಗಳಿಸಿ, ಪ್ರಸಿದ್ದ ಯೋಧನೆಂದು,  ಆಡಳಿತಗಾರನೆಂದು ಹೆಸರು ಪಡೆದಿದ್ದ. ಆದರೆ ಅವನಿಗೆ ಸಾಮ್ರಾಟತನದ ಬಗ್ಗೆ ಇಬ್ಬಂದಿತನವಿತ್ತು. ರೋಮಿನಿಂದ ದೂರದ ಕಾಫಿ ಎಂಬ ಒಂದು ದ್ವೀಪದಲ್ಲಿ ಐಷಾರಾಮವಾಗಿಯೇ ಹೆಚ್ಚು ಕಾಲವನ್ನು ಕಳೆಯುತ್ತಿದ್ದ. ಅದಕ್ಕೆ ಅವನ ಪತ್ನಿಯ (ಜೂಲಿಯಾ) ದುರ್ನಡತೆಯೂ ಒಂದು ಕಾರಣವಿರಬಹುದು. ಟೈಬೀರಿಯಸ್ ಬಹಳ ಕ್ರೂರಿಯಾಗಿ ಮಾರ್ಪಟ್ಟು ಹಲವರನ್ನು ಕೊಲ್ಲಿಸಿದ, ಇನ್ನು ಹಲವರನ್ನು ಸೆರೆಯಲ್ಲಿರಿಸಿದ. ಇದರಿಂದಾಗಿ ಜನ ಅವನ ವಿರುದ್ಧ ತಿರುಗಿಬಿದ್ದರು. ಅವನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಯಿತು ಎನ್ನುವುದು ವದಂತಿ. ಅದರಲ್ಲಿ ಬಹುಶಃ ಕಲಿಗುಲನ ಕೈವಾಡ ಇದ್ದಿರಬಹುದು. ನಂತರ ಅಧಿಕಾರಕ್ಕೆ ಬರುವವನೇ ಕಲಿಗುಲ.

ಕಲಿಗುಲನ ಬಗ್ಗೆಯೂ ತಿರುಮಲೇಶರು ಪ್ರತ್ಯೇಕ ನಾಟಕ ಬರೆದಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books