ರಂಗದಂಗಳ

Author : ವಿಜಯಾ ಸುಬ್ಬರಾಜ್

Pages 528

₹ 320.00




Year of Publication: 2010
Published by: ಕಣ್ವ ಪಬ್ಲಿಕೇಷನ್ಸ್
Address: ಕಾಲ ಕನಸು, ನಂ.894, 1ನೇ ಮುಖ್ಯರಸ್ತೆ, ನಿಸರ್ಗ ಬಡಾವಣೆ, ಚಂದ್ರಲೇಔಟ್, ಬೆಂಗಳೂರು- 560072
Phone: 08023426778

Synopsys

‘ರಂಗದಂಗಳ’ ಡಾ. ವಿಜಯಾ ಸುಬ್ಬರಾಜ್ ಅವರ ಸಮಗ್ರ ನಾಟಕಗಳ ಸಂಕಲನ. ಮಹಿಳೆ ಅನೇಕ ಬಿಕ್ಕಟ್ಟುಗಳ ನಡುವೆಯೇ ತನ್ನತನ, ಅಭಿವ್ಯಕ್ತಿ ತೋರಬೇಕಿದೆ. ಒಂದೆಡೆ ಪರಂಪರೆ, ಮತ್ತೊಂದೆಡೆ ಈಗಾಗಲೇ ಇರುವ ದಿಗ್ಗಜರ ಮಾರ್ಗ, ಮತ್ತೊಂದೆಡೆ ಅಸ್ತಿತ್ವ ತೋರಬೇಕಾದ, ಉಳಿಯಬೇಕಾದ ಹಂತದಲ್ಲಿ ತಮ್ಮ ನಾಟಕಗಳ ಮೂಲಕ ಹೊಸತನಕ್ಕೆ ಡಾ.ವಿಜಯಾ ಸ್ಪಂದಿಸಿದ್ದಾರೆ.

ತೆಲುಗು, ಹಿಂದಿ, ಪಂಜಾಬಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿರುವ, ರೂಪಾಂತರಿಸಿರುವ ಅವರ ಪ್ರಯತ್ನ ಕಡಿಮೆಯದಲ್ಲ. ಗ್ರೀಕ್, ಇಂಗ್ಲಿಷ್, ಇಟಾಲಿಯನ್, ಸಂಸ್ಕೃತ ಸಾಹಿತ್ಯದ ಅವರ ತಿಳಿವಳಿಕೆ ಗಮನಾರ್ಹ. ಈ ಹಿನ್ನೆಲೆಯಲ್ಲಿ ಮಹಿಳೆಯ ವಿವಿಧ ಮುಖಗಳನ್ನು, ಆಯಾಮ. ಅಭೀಪ್ಸೆ, ಹೊಯ್ದಾಟ, ಪ್ರತಿಭಟನೆ, ವ್ಯಕ್ತಿತ್ವ, ಅಸ್ತಿತ್ವಗಳನ್ನು ತಮ್ಮ ನಾಟಕಗಳ ಮೂಲಕ ಡಾ.ವಿಜಯಾ ನಿರೂಪಿಸಿದ್ದಾರೆ. ಕೃತಿಯಲ್ಲಿ ಪಾಂಚಾಲಿ, ಪಾದ್ರಿಯೊಬ್ಬನ ಕತೆ, ನಗರವಧು ಸಾಲವತಿ, ಪ್ರೇಮ ಸಮಾಧಿ, ದಂಗೆ ಎದ್ದವಳು, ಮತ್ತೊಂದು ಮಹಾಭಾರತ, ಮಿಲನ, ಅನುಬಂಧ ಎಂಬ ಎಂಟು ಕಥೆಗಳಿವೆ.

About the Author

ವಿಜಯಾ ಸುಬ್ಬರಾಜ್
(20 April 1947)

ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್‌ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...

READ MORE

Related Books