ಎಚ್. ಡುಂಡಿರಾಜ್ ಅವರ ಹಾಸ್ಯ ಬರಹಗಳ ಸಂಕಲನ. ಈ ಪುಸ್ತಕದ ಮೊದಲ ಮುದ್ರಣ 2007ರಲ್ಲಿ ಆಗಿದ್ದು 2009ರಲ್ಲಿ ಎರಡನೆಯ ಮುದ್ರಣವನ್ನು ಕಂಡಿದೆ. ಇದರಲ್ಲಿ 35 ಲಲಿತ ಪ್ರಬಂಧಗಳಿವೆ.
ಕನ್ನಡದಲ್ಲಿ ಬೇಂದ್ರೆಯಾದಿಯಾಗಿ ಅನೇಕ ಪದಗಾರುಡಿಗರು ಇದ್ದಾರೆ. ಆದರೆ ಆ ಬಲವನ್ನು ಹಾಸ್ಯವ್ಯಂಗ್ಯಕ್ಕೆ ಅದ್ಭುತವಾಗಿ ಅಳವಡಿಸಿಕೊಂಡವರು ಬಹುಶಃ ಬಿಳಿಗಿರಿ, ವೈಎನ್ಕೆ ಮತ್ತು ಡುಂಡಿರಾಜ ಮಾತ್ರ. ವೈಎನ್ಕೆ ಪನ್ ಗೆ ಇಂಗ್ಲೀಷ್ ಭಾಷೆಯ ಸಹಾಯ ಬೇಕಿತ್ತು. ಆದರೆ ಡುಂಡಿ ಕನ್ನಡದ ನುಡಿಗಟ್ಟಿನಲ್ಲೇ ಈ ಚಮತ್ಕಾರಗಳನ್ನು ಅದ್ಭುತವಾಗಿ ಮಾಡಬಲ್ಲ. ಕವಿತೆಗಳಲ್ಲಿ ಅದು ಚುರುಕಾಗಿ ಚುಟುಕಾಗಿ ಕಾಣಿಸಿಕೊಂಡರೆ, ಪ್ರಬಂಧಗಳಲ್ಲಿ ಅದು ವಿಸ್ತಾರವಾಗಿ ಕಾಣಿಸುತ್ತದೆ. -ಎಂ.ಎಸ್. ಶ್ರೀರಾಮ್ ಡುಂಡಿರಾಜರ ಲಲಿತ ಪ್ರಬಂಧಗಳ ಸಂಕಲನ.
©2024 Book Brahma Private Limited.