ಡಾ. ಲೀಲಾವತಿ ದೇವದಾಸ್ ಅವರ ಕೃತಿ-ಆಸ್ಪತ್ರೆಯಲ್ಲಿ ಹಾಸ್ಯ. ಆಸ್ಪತ್ರೆಯಲ್ಲಿ ಹಾಸ್ಯ ಹೇಗೆ ಸಾಧ್ಯ ಎನ್ನುವಂತಿಲ್ಲ. ತಮ್ಮ ವೃತ್ತಿ ಅನುಭವದ ಹಿನ್ನೆಲೆಯಲ್ಲಿ ಲೇಖಕಿಯು ಹಾಸ್ಯ ಪ್ರಧಾನವಾದ ಪ್ರಸಂಗಗಳನ್ನು ಸಾಹಿತ್ಯವಾಗಿ ಪರಿಗಣಿಸಿ ಇಲ್ಲಿ ದಾಖಲಿಸಿದ್ದಾರೆ. ವೈದ್ಯರ, ಸಿಬ್ಬಂದಿಯ, ರೋಗಿಗಳ ಎಡವಟ್ಟುತನದಿಂದ, ಮರೆಗುಳಿತನದಿಂದ, ಭಾಷಾ ಗೊಂದಲದಿಂದ ಅನಿರೀಕ್ಷಿತವಾಗಿ ಹಾಸ್ಯ ಚಿಮ್ಮುತ್ತದೆ, ವೈದ್ಯರ ಚಿಕಿತ್ಸೆಗೆ ಪೂರಕವಾಗಿ ರೋಗ ಗುಣಪಡಿಸಲು ಸಹಾಯಕವಾಗುತ್ತದೆ. ಆಸ್ಪತ್ರೆಯಲ್ಲಿ ನಡೆಯುವ ಕೆಲವು ಹಾಸ್ಯ ತುಣುಕುಗಳನ್ನು ವೈದ್ಯ ಲೇಖಕಿ ಇಲ್ಲಿ ಸಂಗ್ರಹಿಸಿ ನೀಡಿದ್ದಾರೆ.
©2025 Book Brahma Private Limited.