ಪಾ.ವೆಂ. ಆಚಾರ್ಯರ ಸಮಗ್ರ ಸಾಹಿತ್ಯ ಸಂಪುಟ ಯೋಜನೆಯಡಿ ‘ಇವರೇ ಲಾಂಗೂಲಾಚಾರ್ಯರು’ ಕೃತಿ ಪ್ರಕಟಿಸಿದ್ದು, ಶ್ರೀನಿವಾಸ ಹಾವನೂರು ಹಾಗೂ ಎಸ್.ಎಲ್. ಶ್ರೀನಿವಾಸ ಮೂರ್ತಿ ಅವರು ಸಂಪಾದಿಸಿದ್ದಾರೆ. ಕೃತಿಯು ಪಾ.ವೆಂ. ಆಚಾರ್ಯರ ಸಾಹಿತ್ಯದಿಂದ ಆಯ್ದ ಹರಟೆಗಳ ಸಂಕಲನವಾಗಿದೆ. ಕಳ್ಳನ ಹೆಜ್ಜೆ ಮತ್ತು ಈಶ ಸಂಕಲ್ಪ, ಕಿಂ ಕರ್ತವ್ಯ? , ಕೂಷ್ಮಾಂಡ ವಿಜಯಂ, ಕ್ಯೂ ಗಾಂಧಿ ಮತ್ತು ನಾನು, ಗಾರ್ದಭೋಪಾಖ್ಯಾನಂ, ಎಷ್ಟು ಕರ್ನಾಟಕ?, ಇರಬೇಕು ನಿಂದಕರು, ಭಪ್ಪರೆ ಮೆಣಸಿನಕಾಯಿ ಹೀಗೆ ಒಟ್ಟು 57 ವೈವಿಧ್ಯಮಯವಾದ ಹರಟೆಯ ಲೇಖನಗಳಿವೆ.
©2025 Book Brahma Private Limited.