ಪೊರಕೆ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 100

₹ 1.00




Year of Publication: 1946
Published by: ಪ್ರಗತಿಶೀಲ ಲೇಖಕರ ಸಂಘ
Address: ಬೆಂಗಳೂರು

Synopsys

ಘನವಾದ ವಿಷಯಗಳನ್ನು ಎತ್ತಿಕೊಂಡು ಹಗುರವಾಗಿ ಹಾಗೂ ಹಗುರ ವಿಷಯವನ್ನೆತ್ತಿಕೊಂಡು ಗಂಭೀರವಾಗಿ ಬರೆಯುವುದು ಹರಟೆಗಳ ಲಕ್ಷಣ. ಹರಟೆಗಳಲ್ಲಿ ಸತ್ಯವಿರುತ್ತದೆ; ಆದರೆ, ಅಷ್ಟೇ ಉದಾಸೀನವೂ ಇರುತ್ತದೆ. ಇಂತಹ ಗುಣಲಕ್ಷಣಗಳ ಕೃತಿ-ಪೊರಕೆ. ಲೇಖಕ ಅ.ನ.ಕೃಷ್ಣರಾಯರು ಬರೆದಿದ್ದಾರೆ. ಹಳೆಯದು-ಹೊಸದು, ವಾಕ್ಚಿತ್ರ, ಆತ್ಮಹತ್ಯಾ ಯೋಗ, ಪೊರಕೆ, ಗ್ರಂಥ ವಿಮರ್ಶೆ, ನಮ್ಮೂರಿಗೆ ಬನ್ನಿ, ದೊಡ್ಡಮನುಷ್ಯ, ಪುಸ್ತಕ ಕೊಳ್ಳುವುದು ಹೀಗೆ ಒಟ್ಟು 16 ಹರಟೆಗಳು ಇಲ್ಲಿ ಸಂಕಲನಗೊಂಡಿವೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books