ವೃತ್ತಿಯಲ್ಲಿ ವೈದ್ಯರಿದ್ದು, ನಗೆ ಬರಹಗಳ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡಾ. ರಾಶಿ ( ಎಂ. ಶಿವರಾಂ) ಅವರು 1947ರಲ್ಲಿ. ‘ಕೊರವಂಜಿ’ ಪತ್ರಿಕೆಯ ಮೂಲಕ ಹಾಸ್ಯ ಪತ್ರಿಕೋದ್ಯಮಕ್ಕೆ ಒಂದು ಆಯಾಮವನ್ನೇ ಒದಗಿಸಿದರು. ಸಾಹಿತ್ಯದಲ್ಲೂ ಹಾಸ್ಯಪ್ರಜ್ಞೆಯೊಂದಿಗೆ ನಗಲು ಕಲಿಸಿದವರು ರಾಶಿ. ಅವರದ್ದು ವಿಶಿಷ್ಟ್ಯ ಹಾಸ್ಯಪ್ರಜ್ಞೆ. ಕೈಲಾಸಂ, ನಾ. ಕಸ್ತೂರಿ, ಬೀಚಿ ಅವರ ಸಮಕಾಲೀನರಾದ ಅವರು, ತಮ್ಮದೇ ಶೈಲಿಯನ್ನು ರೂಢಿಸಿಕೊಂಡಿದ್ದವರು. ರಾಶಿಯವರ ಆಯ್ದ ನಗೆ ಬರಹಗಳನ್ನು ಅಪರಂಜಿ ಶಿವು ಅವರು ಸಂಪಾದಿಸಿರುವುದೇ ಈ ಕೃತಿ. .
©2025 Book Brahma Private Limited.