ಪಾ.ವೆಂ. ಆಚಾರ್ಯರ ಸಮಗ್ರ ಸಾಹಿತ್ಯ ಸಂಪುಟದ ಭಾಗ-2ರ ಸರಣಿಯಲ್ಲಿ ಆಯ್ದ ನಗೆ ಬರೆಹಗಳು ಶೀರ್ಷಿಕೆಯಡಿ ಚಿಂತಕರಾದ ಶ್ರೀನಿವಾಸ ಹಾವನೂರು ಹಾಗೂ ಪ್ರೊ. ಅ.ರಾ. ಮಿತ್ರ ಅವರು ಸಂಪಾದಿಸಿದ ಕೃತಿ ಇದು. ಪಾ.ವೆಂ. ಆಚಾರ್ಯರು ದೇಶ ವಿದೇಶದ ವಿಸ್ಮಯಕಾರಿ, ಕುತುಹಲಕಾರಿ ಘಟನೆ, ಮಾನವಾಸಕ್ತಿಯ ಅಂಶಗಳ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ.ಜೊತೆಗೆ ನಗೆ ಬರೆಹಗಳೂ ಇವೆ. ಆ ಪೈಕಿ, ರಾಜಕಾರಣ, ಸಾಮಾಜಿಕ ಸನ್ನಿವೇಶ, ಶಿಕ್ಷಣ ವಲಯ ಹೀಗೆ ಹತ್ತು ಹಲವು ವಲಯದಲ್ಲಿ ನಗೆ ಬರೆಹಗಳನ್ನು ಬರೆದಿರುವುದು ಅವರ ಓದು ಹಾಗೂ ಸಾಮಾಜಿಕ ಸಂಪರ್ಕದ ವೈಶಾಲ್ಯತೆಯನ್ನು ಗುರುತಿಸಬಹುದು. ಈ ಕೃತಿಯಲ್ಲಿ ಬೀದಿಯಲ್ಲಿ ಕಾಮಣ್ಣರು, ಅಮ್ಮಾವ್ರ ಗಂಡಾಯಣ, ಸಾಯಲಿಕ್ಕೆ ಪುರುಷೊತ್ತಾಗಲಿಲ್ಲ, ಮಂಗಾಯಣಂ, ಸೀರೆ ಮತ್ತು ಮಹಾಭಾರತ, ಮದುವೆಯಾದರೂ ಸುಖ ಪಡುವುದು ಹೇಗೆ? ಇಂತಹ ಒಟ್ಟು 17 ನಗೆಬರಹಗಳನ್ನು ಈ ಸಂಕಲನವು ಒಳಗೊಂಡಿದೆ.
©2025 Book Brahma Private Limited.