ಲೇಖಕ ಪಾ.ವೆಂ. ಆಚಾರ್ಯ ಅವರ ನಾಲ್ಕನೇ ನಗೆ ಬರಹಗಳ ಸಂಗ್ರಹ ’ವಕ್ರ ದೃಷ್ಟಿ’. ಸುಮಾರು ಎರಡೂವರೆ ದಶಕಗಳ ಕಾಲ ’ಕರ್ಮವೀರ’, ’ತುಷಾರ’, ’ಸುಧಾ’, ’ಪ್ರಜಾವಾಣಿ’,’ ’ವಿಜಯವಾಣಿ’ ಹಾಗೂ ’ತರಂಗ’ಗಳಲ್ಲಿ ಪ್ರಕಟಿತ ಹಾಗೂ ಆಕಾಶವಾಣಿಗಳಲ್ಲಿ ಬಿತ್ತರವಾದ ಲಘುಬರಹಗಳ ಸಂಗ್ರಹವಾಗಿದೆ. ಹಾಸ್ಯ ಮೀಮಾಂಸೆ, ನಿಮ್ಮ ಅಲರ್ಜಿ ಯಾವುದು?, ಎಷ್ಟು ಕರ್ನಾಟಕ?, ಭಾವಿ ಜಗತ್ತಿನಲ್ಲಿ ಮಹಿಳೆಯರ ಸ್ಥಾನ, ಕಪ್ಪು ಕಪ್ಪೆಂದೇಕೆ ಬೀಳುಗಳೆವಿರಿ?. ವಾಲ್ಮೀಕಿಯ ಸಂತಾನ, ಮದುವೆಯಾದರೂ ಸುಖ ಹೇಗೆ ಪಡೆಯಬೇಕು, ದೇವತಾ ಚಟಗಳು, ವಾನರಾಯಣ ಸೇರಿದಂತೆ 33 ಲಘು ಬರಹಗಳಿವೆ.
©2025 Book Brahma Private Limited.