ಹಿರಿಯ ಲೇಖಕ ಎಚ್.ಶಾಂತರಾಜ ಐತಾಳ್ ಅವರು 2021 ಪ್ರಕಟಿಸಿದ ಈ ಕೃತಿಯು ಕೊರೋನಾ ಕಾಲದಲ್ಲಿ 180 ದಿನಗಳ ಕಾಲ ಎಡೆಬಿಡದೆ ಅವರು ತಮ್ಮ ಸ್ನೇಹಿತ ಬಳಗಕ್ಕೆ ಕಳುಹಿಸಿದ ಸುಂದರ ಸಂದೇಶಗಳಿವೆ. ಪ್ರತಿ ದಿನದ ಸಂದೇಶಗಳನ್ನು ಅವರು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ 'ಜೀವನ ತತ್ವ ' ಪುರಾಣ ಮಾಹಿತಿ, ಧ್ಯೇಯವಾಕ್ಯಗಳು,ಸಂತವಾಣಿ, ಕವಿವಾಣಿ,ದಾಸವಾಣಿ, ಅಮೃತಬಿಂದು, ವಿವೇಕವಾಣಿ, ಸುಭಾಷಿತಗಳಾಗಿಯೂ ಓದುಗರ ಮನಸ್ಸನ್ನು ಪ್ರಫುಲ್ಲಗೊಳಿಸುವ 'ನಕ್ಕು ಬಿಡಿ' ಎಂದೂ ಎರಡು ಭಾಗಗಳಾಗಿ ವಿಂಗಡಿಸುತ್ತಾರೆ. ಜಗತ್ಪ್ರಸಿದ್ಧ ವ್ಯಕ್ತಿಗಳು, ಮಹರ್ಷಿಗಳು, ಮಹಾತ್ಮರು, ಮಹಾನ್ ಸಾಹಿತಿಗಳು ಹೇಳಿದ ಮಾತುಗಳ ಸಾರವು ಜೀವನ ತತ್ವಗಳಾಗಿ ರೂಪುಗೊಂಡರೆ ಡಿ.ವಿ.ಜಿಯವರ ಮಂಕು ತಿಮ್ಮನ ಕಗ್ಗದಲ್ಲಿರುವಂತೆ 'ನಕ್ಕು ನಗಿಸುವುದದುವೆ ಅತಿಶಯದ ಧರ್ಮ'ವೆಂದು ತಿಳಿದು ಯಾರನ್ನೂ ಟಾರ್ಗೆಟ್ ಆಗಿ ಮಾಡದೆ ಮನಸ್ಸನ್ನೊಂದು ಕ್ಷಣ ಖುಷಿಯಾಗಿಡುವ ತಿಳಿ ಹಾಸ್ಯದ ಝರಿ 'ನಕ್ಕು ಬಿಡಿ'ಯ ಉದ್ದಕ್ಕೂ ಹರಿಯುತ್ತದೆ. ಹಾಸ್ಯರತ್ನ ಡುಂಡಿರಾಜ್ ಅವರು ಈ ಕೃತಿಗೆ ಅಂದವಾದ ಬೆನ್ನುಡಿಯನ್ನು ಬರೆದಿದ್ದಾರೆ.
©2024 Book Brahma Private Limited.