ಚಿಂತಕ ಪಾ.ವೆಂ. ಆಚಾರ್ಯರು ಲಾಂಗೂಲಾಚಾರ್ಯ ಎಂಬ ಹೆಸರಿನಿಂದ ಬರೆದ ಹರಟೆಗಳು ಈ ಕೃತಿಯ ಜೀವಾಳ. ಕರ್ಮವೀರ ಸಾಪ್ತಾಹಿಕದಲ್ಲಿ ಓದುಗರೊಡನೆಯ ಹರಟೆಗಳು ಎಂಬ ಸ್ಥಿರ ಶೀರ್ಷಿಕೆಯಡಿ ಬರೆದ ಹರಟೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಇಲ್ಲಿಯ ಬಹುತೇಕ ಲೇಖನಗಳು ಕಸ್ತೂರಿ ಮಾಸ ಪತ್ರಿಕೆಯಲ್ಲೂ ಪ್ರಕಟವಾದಂತಹವು. ಲಾಂಗೂಲಾಚಾರ್ಯರ ಹರಟೆಗಳೇಂದೇ ಇವು ಪ್ರಸಿದ್ಧಿ ಪಡೆದಿವೆ.
ಕೃತಿಯಲ್ಲಿ ಶ್ರೀ ಗಣೇಶಾಯ ನಮಃ, ಸ್ವಲ್ಪ ಅವಿವೇಕವಿರಲಿ, ಸೀರೆ ಮತ್ತು ಮಹಾಭಾರತ, ಬಫೆಲೋಲ್ಯಾಂಡ್, ಪಿಟೀಲು ಬಾರಿಸಿ ಬೆಳೆ ಹೆಚ್ಚಿಸಿರಿ, ಹೆಂಗಸರನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?, ಮಾಸ್ತರರಿಗೆ ಮದುವೆ ಬೇಕು ಇತ್ಯಾದಿ ಹೀಗೆ ಒಟ್ಟು 21 ಹರಟೆಗಳು ಸಂಕಲನಗೊಂಡಿವೆ.
©2025 Book Brahma Private Limited.