‘ನಗೆಗನ್ನಡಂ ಗೆಲ್ಗೆ’ ಆಧುನಿಕ ಕನ್ನಡ ಸಾಹಿತ್ಯದ ಹಾಸ್ಯ ಕೃತಿಯಲ್ಲಿ ಹೊರನಾಡ ಕನ್ನಡ ಬರಹಗಾರರ ಬರಹಗಳಿವೆ. ಕನ್ನಡ ಸಾಹಿತ್ಯ ರಂಗದ ಧ್ಯೇಯಗಳಲ್ಲಿ, ಅಮೆರಿಕಕ್ಕೆ ಬಂದು ನೆಲೆಸಿರುವ ಕನ್ನಡಿಗರಿಗೆ ಕನ್ನಡ ಸಾಹಿತ್ಯದ ಅರಿವು ಮರೆಯದಂತೆ ಆಗಾಗ ಅದರ ವಿವಿಧ ಮುಖಗಳನ್ನು ಅವರ ಮುಂದಿಡುವುದು ಮತ್ತು ಅವರ ಸಾಹಿತ್ಯಾಕಾಂಕ್ಷೆಗೆ ಮುದಕೊಟ್ಟು ಅವರ ಸಾಹಿತ್ಯ ಪಸರಿಸಿ ಬೆಳೆಯುವಂತೆ ಉತ್ತೇಜಿಸುವುದು ಮುಖ್ಯವಾದವು.
ಇದನ್ನು ಗಮನದಲ್ಲಿಟ್ಟುಕೊಂಡು ಈ ಕೃತಿಯನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ., ಮೊದಲ ಭಾಗದಲ್ಲಿ ಕಳೆದ ಶತಮಾನದ ಕನ್ನಡ ಹಾಸ್ಯ ಸಾಹಿತ್ಯದ ಬೆಳವಣಿಗೆಯನ್ನು ಚಿತ್ರಿಸುತ್ತಾ ಕನ್ನಡದ ಹಿರಿಯ ಹಾಸ್ಯ ಸಾಹಿತಿಗಳ ಕೃತಿಗಳ ಪರಿಚಯ ಮಾಡಿಕೊಡುವುದು ಮತ್ತು ಎರಡನೇ ಭಾಗದಲ್ಲಿ ಅಮೆರಿಕದ ಕನ್ನಡಿಗರ ಹಾಸ್ಯ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಅವರ ಸೃಜನಶೀಲ ಸಾಹಿತ್ಯ ಸಾಧನೆಯನ್ನು ಉತ್ತೇಜಿಸುವುದು. ಪುಸ್ತಕದ ಲೇಖನಗಳನ್ನೆಲ್ಲ ಸಾಧ್ಯವಾದಷ್ಟು ಕನ್ನಡಿಗರಿಂದಲೇ ಬರೆಸಲಾಗಿದೆ.
ಈ ಸಂಕಲನದಲ್ಲಿ ಒಟ್ಟು 28 ಲೇಖನಗಳಿದ್ದು ಅವುಗಳಲ್ಲಿ 22 ಲೇಖನಗಳನ್ನು ಅಮೆರಿಕಾದಲ್ಲಿರುವ ಕನ್ನಡಿಗರೇ ಬರೆದಿದ್ದಾರೆ. ಉಳಿದ ಲೇಖನಗಳನ್ನು ಭಾರತದ ಕನ್ನಡ ಬರಹಗಾರರಿಂದ ಬರೆಸಲಾಗಿದೆ.
©2024 Book Brahma Private Limited.