ವಿಪರೀತ

Author : ಪಾ.ವೆಂ. ಆಚಾರ್ಯ

Pages 166

₹ 5.00




Year of Publication: 1977
Published by: ಡಿ. ವಿ. ಕೆ. ಮೂರ್ತಿ
Address: ಕೃಷ್ಣಮೂರ್ತಿಪುರಂ, ಮೈಸೂರು, 570004

Synopsys

ಲೇಖಕ ಪಾ.ವೆಂ.ಆಚಾರ್ಯ ಅವರು ಬರೆದ ಕೃತಿ ’ವಿಪರೀತ’ ನಗೆ ಬರಹಗಳ ಸಂಗ್ರಹವಾಗಿದೆ. ಕೋಟ್ಯಧಿಪತಿಯ ಕೋಟಲೆಗಳು, ನರಿ, ಹಾವು ಮತ್ತು ಹೇಡಿ, ರಾತ್ರಿ ಸಮಸ್ಯೆ, ಕವಿಶೌರ್ಯ ಪ್ರಕರಣಂ, ವರ್ಗರಹಿತ ವಿಶ್ವವಿದ್ಯಾಲಯ, ನಿಂದಕರಿರಬೇಕು, ನಾನು ಪವಾಡಗಳನ್ನು ನಂಬುತ್ತೇನೆ, ಕಳಪ್ರಪೂರ್ಣ ಆಯುಷ್ಕರ್ಮ ಶಾಲಾ, ಯದ್ವ ತದ್ವ ಯೆಂಕಣ್ಣಯ್ಯನವರು, ಹಾಲು ಮತ್ತು ಕೋಲು, ಈರುಳ್ಳಿ ಮಹಿಮೆ, ಹಳೇದಾದರೂ ಹೊಸದು ಸೇರಿದಂತೆ 26 ನಗೆಬರಹಗಳಿವೆ.

About the Author

ಪಾ.ವೆಂ. ಆಚಾರ್ಯ
(06 February 1915 - 04 May 1992)

ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್'  ಸೇರಿದರು.  ...

READ MORE

Related Books