`ಸಂಸಾರದಲ್ಲಿ ಸ್ವಾರಸ್ಯ’ ಕೃತಿಯು ಜ್ಯೋತ್ಸ್ನಾ ಕಾಮತ್ ಅವರ ಹಾಸ್ಯಮಯ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿ 18 ಅಧ್ಯಾಯಗಳಿದ್ದು, ಇವರು ಹೀಗೇನೇ, ಅಡಿಗೆ ಬಲ್ಲ ನಲ್ಲ, ಅತಿಥ್ಯ, ರಾವಣನನ್ನು ಮೋಹಿಸಿದ ಸೀತೆ, ಗುಜುರಿ ಗುತ್ತಿಗೆ, ಟೆಲಿಪೋನು ಬಂದಿತು, ವಾಕ್ ಚಾತುರ್ಯ, ರೇಡಿಯೋ ರಿಪೇರಿ, ರಾಯರಿಕಾನಾಮಿಕ್ಸ್, ತರಕಾರಿ ಖರೀದಿ, ತೂಕ ಕಡಿಮೆಮಾಡಿ, ಅಜ್ಞಾತವಾಸಿ, ಅನಾರೋಗ್ಯಧಾಮ, ಹೆಸರಿನ ಗೊಂದಲ, ಒಂದು ದಂತಕಂತೆ, ಕಲಹದ ಕಹಳೆ, ನಾನು ಮುದುಕಿಯೇ?, ಸಭಾಧ್ಯಕ್ಷ ಇವೆಲ್ಲವು ಈ ಕೃತಿಯಲ್ಲಿದೆ.
ಕೃತಿಗೆ ಮುನ್ನುಡಿ ಬರೆದಿರುವ ಚದುರಂಗ ಅವರು, ಜ್ಯೋತ್ಸ್ನಾ ಕಾಮತ್ ಅವರದು ಕನ್ನಡಕ್ಕೆ ವಿಶಿಷ್ಟವಾದ ಕೌಟುಂಬಿಕ ಹಾಸ್ಯ. ತಮ್ಮ ಮತ್ತು ತಮ್ಮ ಯಜಮಾನರ ದೌರ್ಬಲ್ಯಗಳನ್ನು ವಿಡಂಬಿಸುವ ರೀತಿ ! ಹೀಗೆ ತಮ್ಮ ಕುಟುಂಬವನ್ನೇ ಪರಿಹಾಸ್ಯಕ್ಕೆ ಗುರಿಮಾಡಬೇಕಾದರೆ ಮಹತ್ತರವಾದ ಮನಸ್ಥೈರ್ಯ ಇರಬೇಕಾಗುತ್ತದೆ. ಆ ಸ್ಥೈರ್ಯವನ್ನು ಲೇಖಕಿಯವರು ಅನುಪಮವಾಗಿ ಈ ಕೃತಿಯಲ್ಲಿ ಮೆರೆದಿದ್ದಾರೆ. ಜ್ಯೋತ್ಸಾ ಕಾಮತರು ಸೃಜಿಸಿರುವ ಲಘು ಹಾಸ್ಯ ಲೇಖನಗಳ ಪ್ರಸ್ತುತ ಕೃತಿ, ಸಮೀಚಿನ ಭೋಜನದಲ್ಲಿ ರುಚಿಕರ ವ್ಯಂಜನ, ಜಿದ್ದಿಗೆ ಅಪ್ಯಾಯಮಾನವಾಗುವಂತೆ ವಿಹ್ವಲ ಮನಸ್ಸಿಗೆ ಮುದ ನೀಡುತ್ತದೆ. ಈ ಕೃತಿಯಲ್ಲಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ನಿರಂತರವಾಗಿ ಸಂಭವಿಸುವ ಸನ್ನಿವೇಶಗಳು, ಘಟನೆಗಳು ಹಾಸ್ಯರಸದಲ್ಲಿ ಮಿಂದು ಮೈದಾಳಿವೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.