‘ಮೈಗಳ್ಳನ ದಿನಚರಿಯಿಂದ’ ಹಿರಿಯ ಲೇಖಕ ಕೆ. ಶಿವರಾಮ ಕಾರಂತರ ಹಾಸ್ಯ ಲೇಖನಗಳ ಸಂಕಲನ. ಹಲವರ ಬದುಕಿನ ಅನುಭವಗಳೇ ಪ್ರಬಂಧ ರೂಪು ತಳೆದಿವೆ. ಇಲ್ಲಿ ಮುಮ್ಮಾತು, ಏಳುವುದು, ಮದುವೆಯ ಆಮಂತ್ರಣ, ನಾಟಕಾವಲೋಕನ, ರಂಗಪ್ಪನವರ ರೈಲು ಪಯಣ, ಮುತ್ತಯ್ಯ ಮಾಸ್ತರು, ಚುನಾವಣೆ, ಕನಸಿನಲ್ಲಿ ಕಂಡದ್ದು, ಕರ್ಮ ಮೀಮಾಂಸೆ, ಓದುವ ವಿಚಾರದಲ್ಲಿ, ಘಂಟೆಯ ನಂಟರ ವಿಚಾರದಲ್ಲಿ ಸೇರಿದಂತೆ ಹಲವು ನಗೆ ಬರಹಗಳಿವೆ..
ದುಡಿಯುವುದಕ್ಕೆ ಒಲ್ಲವೆನ್ನುವ ಮನಸ್ಸನ್ನು ಇಟ್ಟುಕೊಂಡಿರುವ ವ್ಯಕ್ತಿಯು ಅದೇ ಜೀವನದ ಆದರ್ಶ ಎಂದೂ ತಿಳಿದಿರುತ್ತಾನೆ. ಹೀಗೆ ಮೈಗಳ್ಳತನವನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಯ ದಿನಚರಿ ಹೇಗಿರುತ್ತದೆ ಎಂಬುದನ್ನು ಹೇಳಲು ಲೇಖಕರು 14 ಹರಟೆಗಳನ್ನು ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹರ್ಷ ಪ್ರಕಟಣಾಲಯವು 1951ರಲ್ಲಿ (ಪುಟ: 108) ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. ಇದಕ್ಕೂ ಮುನ್ನ ಕಾರಂತರ ವಿಚಾರವಾಣಿ ಪತ್ರಿಕೆಯಲ್ಲಿ ಧಾರಾವಾಹಿಯಾಗಿ (09-05-1951ರಿಂದ) ಪ್ರಕಟಗೊಂಡಿತ್ತು.
©2025 Book Brahma Private Limited.