ಸಂಪನ್ನರಿದ್ದಾರೆ ಎಚ್ಚರಿಕೆ

Author : ಬೀchi

Pages 148

₹ 60.00




Year of Publication: 2012
Published by: ಸಮಾಜ ಪುಸ್ತಕಾಲಯ
Address: ಸಮಾಜ ಪುಸ್ತಕಾಲಯ, ಶಿವಾಜಿ ರೋಡ್, ಧಾರವಾಡ
Phone: 8762102715

Synopsys

’ಸಂಪನ್ನರಿದ್ದಾರೆ ಎಚ್ಚರಿಕೆ’ ಕೃತಿಯಲ್ಲಿ ಬೀchi ಮುನ್ನುಡಿ ಹೀಗಿದೆ:  ಸಂಪನ್ನ ಕಳ್ಳರು ! ಇದಂತಹ ವಿರೋಧಾಭಾಸ, ಹಾಗಂದರೆ, ಸಂಪನ್ನರ ವೇಷದಲ್ಲಿ ಇರುವ ಕಳ್ಳರು ಎಂದರ್ಥ. ಹಾಗಾದರೆ ಈ ಸಂಪನ್ನ ಕಳ್ಳರು ಎಲ್ಲಿರುತ್ತಾರೆ ? ಎಲ್ಲಿರುವುದಿಲ್ಲ? ಜೇಲೊಂದನ್ನು ಬಿಟ್ಟು, ಬೇರೆ ಎಲ್ಲೆಲ್ಲಿಯೂ ಇರುತ್ತಾರೆ. ಅಧಿಕಾರದ ಗಾದಿಗಳ ಮೇಲೆ ಮಾನ್ಯರಾಗಿ ಕುಳಿತಿದ್ದಾರೆ. ಮಠ - ಪೀಠಗಳಲ್ಲಿ ಸಂನ್ಯಾಸಿ ಸ್ವಾಮಿಗಳಾಗಿ ಪವಡಿಸಿದ್ದಾರೆ. ಸಮಾಜ ಸೇವಕರಾಗಿ, ದೇಶಭಕ್ತರಾಗಿ, ಪ್ರಜಾಮಿತ್ರರಾಗಿ, ಜ್ಞಾನೋಪದೇಶಕರಾಗಿ ಎಲ್ಲೆಲ್ಲಿಯೂ ಇದ್ದಾರೆ; ಮುಂದೂ ಇರುತ್ತಾರೆ. 

’ಪ್ರಜಾಮತ’ ಪತ್ರಿಕೆಯಲ್ಲಿ ಬಹುತೇಕ ಪ್ರಕಟವಾದ ನಗೆಬರಹಗಳ ಸಂಕಲನ ಇದು. ಒಟ್ಟು ಮೂವತ್ತು ಹಾಸ್ಯ ಲೇಖನಗಳು ಕೃತಿಯಲ್ಲಿವೆ. 

About the Author

ಬೀchi
(23 April 1913 - 07 December 1980)

'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು. ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ...

READ MORE

Related Books