ಲೇಖಕ ಡಾ. ಬಿ. ಪ್ರಭಾಕರ ಶಿಶಿಲ ಅವರ ಹಾಸ್ಯ ಪ್ರಬಂಧಗಳ ಕೃತಿ-ನಮ್ಮೂರ ಜನಪದರು. ಒಟ್ಟು 12 ಹಾಸ್ಯ ಪ್ರಬಂಧಗಳನ್ನು ಸಂಕಲಿಸಲಾಗಿದೆ. ತಮ್ಮ ವೃತ್ತಿ ಹಾಗೂ ಬದುಕಿನಲ್ಲಿ ಕಂಡುಂಡ ಅನುಭವಗಳಿಗೆ ಹಾಸ್ಯ ರೂಪ ನೀಡಿ ಸಾಹಿತ್ಯವಾಗಿ ಬರೆದ ಲೇಖನಗಳಿವು. ಇವುಗಳಲ್ಲಿ ವ್ಯಂಗ್ಯ, ವಿಡಂಬನೆಗಳಿದ್ದರೂ ಸಮಾಜವನ್ನು ತಿದ್ದುವ ಆರೋಗ್ಯಕರ ಮನಸ್ಸು ಇರುವುದನ್ನು ಕಾಣಬಹುದು. ತಿಳಿ ಹಾಸ್ಯದ ಪ್ರಬಂಧಗಳು ಮನಸ್ಸಿಗೆ ಮುದ ನೀಡುತ್ತವೆ.
©2025 Book Brahma Private Limited.