ಮದಗಜಗಮನೆ ಎಂಬುದು ಖ್ಯಾತ ಹಾಸ್ಯ ಲೇಖಕ ಎಂ.ಎಸ್. ನರಸಿಂಹಮೂರ್ತಿ ಅವರ ನಗೆ ಬರಹಗಳ ಸಂಕಲನ. ಪ್ರತಿ ಪದದಲ್ಲೂ ಹಾಸ್ಯ ಉಕ್ಕಿಸುವ ಇವರ ಬರಹಗಳು ಮನಸ್ಸಿಗೆ ಮುದ ನೀಡುತ್ತವೆ. ಹಾಸ್ಯ ಬರಹವು ಕಷ್ಟಕರವಾಗಿದ್ದು, ಬದುಕಿನ ಪ್ರೀತಿಯೇ ಅವಲಂಬಿಸಿದೆ. ಏಕೆಂದರೆ, ಬದುಕಿನ ಏನೆಲ್ಲ ಕಷ್ಟಗಳಿದ್ದರೂ ನಗುನಗುತ್ತಾ ಸ್ವೀಕರಿಸುವ ಮನೋಸ್ಥೈರ್ಯ ಬೇಕು. ಹಾಸ್ಯ ಬರಹದ ಮೂಲಕವೇ ಬದುಕಿನ ಪ್ರೀತಿ ಹೆಚ್ಚಿಸುವ ಹೊಣೆಗಾರಿಕೆ ಹಾಸ್ಯ ಸಾಹಿತ್ಯದ್ದು. ಅದನ್ನು ಇಲ್ಲಿಯ ಪ್ರತಿ ಬರಹಗಳು ಸಾಬೀತುಪಡಿಸಿವೆ.
©2025 Book Brahma Private Limited.