‘ಹಾಸ್ಯ ಪಟಾಕಿ’-ಈ ಕೃತಿಯ ಕರ್ತೃ ಸಂಪಟೂರು ವಿಶ್ವನಾಥ. ಈ ಹಾಸ್ಯ ತುಣುಕುಗಳು ಓದಿಉಗರಿಗೆ ಕಚಗುಳಿ ಇಡುತ್ತವೆ. ಶ್ರೀ ಕಮಲಂ ಅರಸು ನಗೆ ಬರೆಹಗಳಿಗೆ ಚಿತ್ರ ರಚಿಸಿದ್ದಾರೆ. ಮಕ್ಕಜಳ ಮನೋವಿಕಾಸಕ್ಕೂ , ದೊಡ್ಡವರ ಬೇಸರ ಕಳೆಯಲೂ ಈ ನಗೆ ಬರೆಹಗಳು ಸಹಕಾರಿಯಾಗಿವೆ.
(ಹೊಸತು, ಜುಲೈ 2015, ಪುಸ್ತಕದ ಪರಿಚಯ)
ನಗು ಸಾರ್ವತ್ರಿಕ. ಅದಕ್ಕೆ ಬಡವ-ಬಲ್ಲಿದ-ಜಾತಿ-ಧರ್ಮಗಳ ಹಂಗಿಲ್ಲ. ಬದುಕಿನಲ್ಲಿ ಏಕತಾನತೆ, ಬೇಸರ, ಒಂಟಿತನ ಕಾಡಿದಾಗ ನಗೆಹನಿಗಳು ಮರುಭೂಮಿಯಲ್ಲಿನ ಓಯಸಿಸ್‌ನಂತೆ ಮುದ ನೀಡುತ್ತವೆ. ನಗು ಟಾನಿಕ್‌ನಂತೆ ಎಂದು ವೈದ್ಯರು ಪೂಸಿ ಮಾಡುತ್ತಾರೆ. ನಕ್ಕರೆ ಸ್ವರ್ಗ ಎಂದು ನಗೆ ಸಾಹಿತಿಗಳು ಓದುಗನ ಬೆನ್ನು ಹತ್ತಿದ್ದಾರೆ. ಹಾಸ್ಯ ಸಾಹಿತ್ಯ ಒಂದು ಸಮುದ್ರವಿದ್ದಂತೆ. ಅಲ್ಲಿ ನಗುವಿನ ಅಲೆಗಳ ಭಂಡಾರವೇ ಇರುತ್ತದೆ. ಒಂದರ ಹಿಂದೊಂದು ಹೊಸ ಹೊಸ ಅಲೆಗಳು, ಒಂದು ಮಾಯವಾದಂತೆ ಇನ್ನೊಂದು ಮುನ್ನೆಲೆಗೆ ಬರುತ್ತದೆ. ಸಮಯ ಸಂದರ್ಭಕ್ಕೆ ತಕ್ಕಂತೆ ವೈವಿಧ್ಯಮಯ ಸನ್ನಿವೇಶಗಳು. ನೀವು ಬೇಡವೆಂದರೂ ಉಕ್ಕಿಬರುವ ಸಂತಸದ ಕ್ಷಣಗಳು. 'ನಗುವು ಸಹಜದ ಧರ್ಮ' ಎಂದಿದ್ದಾರೆ ಮಾನ್ಯ ಡಿ. ವಿ. ಜಿ.ಯವರು. ಆದರೆ ಇಂದಿನ ದಿನಗಳಲ್ಲಿ ಸಹಜ ಅಂತಿರಲಿ, ಕೃತಕ ನಗುವಿಗೂ ಬರ ಬಂದಿದೆ. ಎಲ್ಲೆಲ್ಲೂ ಧಾವಂತ – ಆತಂಕ – ದುಗುಡ ತುಂಬಿದ ಮುಖಗಳೇ. ಇಂಥ ಅಪರೂಪದ ಕ್ಷಣಗಳನ್ನು ಕಲೆಹಾಕಿ, ಪೋಣಿಸಿ ನಗೆಹಾರವನ್ನು ಈ ಮೂರೂ ಪುಸ್ತಕಗಳಲ್ಲಿ ನೇಯ್ದುಕೊಟ್ಟಿದ್ದಾರೆ ಲೇಖಕರು. ನಗೆ ಎಂಬ ಮಿಂಚನ್ನು ಮುಖಕ್ಕೆ ಬಡಿದು ಕ್ಷಣಕಾಲ ಬೆಳಗಲೆಂದು ಯತ್ನಿಸಿದ್ದಾರೆ.
©2024 Book Brahma Private Limited.