ಹೆಸರಿನಲ್ಲೇನಿದೆ ಮಹಾ

Author : ಸುಧಾ ಸರನೋಬತ್

Pages 55

₹ 45.00




Published by: ಶ್ರೀನಿವಾಸ ಪುಸ್ತಕ ಪ್ರಕಾಶನ

Synopsys

ಲೇಖಕಿ ಸುಧಾ ಸರನೋಬತ್ ಅವರ ಹಾಸ್ಯ ಲೇಖನ ಸಂಕಲನ ಹೆಸರಿನಲ್ಲೇನಿದೆ ಮಹಾ. ಈ ಕೃತಿಯಲ್ಲಿ ಒಟ್ಟು 17 ಲೇಖನಗಳಿವೆ. ಸುಧಾ ಸರನೋಬತ್ ರವರ ಹಾಸ್ಯ ಲೇಖನಗಳು ಸುಧ, ತರಂಗ,ಅಪರಂಜಿ ಇತ್ಯಾದಿ ಜನಪ್ರಿಯ ಪತ್ರಿಗೆಗಳಲ್ಲಿ ಪ್ರಕಟಗೊಂಡಿವೆ. ಈ ಪುಸ್ತಕದ ಮುನ್ನುಡಿ ಎನ್ ರಾಮನಾಥ್ ರವರು ಬರೆದ್ದಿದ್ದಾರೆ.

ಸುಧಾರವರು ಈ ಎಲ್ಲಾ ಲೇಖನಗಳಲ್ಲಿ ಓದುಗರಿಗೆ ನಗಿಸುವುದಲ್ಲದೇ ಒಂದು ಒಳ್ಳೆಯ ಸಂದೇಶವನ್ನು ಕೂಡ ನೀಡಿದ್ದಾರೆ. ಈ 17 ಹಾಸ್ಯ ಲೇಖನಗಳ ಮಧ್ಯೆ ಅವರು " ಅವ್ವ" ಎನ್ನುವು ಒಂದು ಲೇಖನದಲ್ಲಿ, ತಮ್ಮಿಂದ ಬಹಳ ಬೇಗನೆ ಅಗಲಿದ ತಮ್ಮ ತಾಯಿಯ ಬಗ್ಗೆ ಬರೆದ್ದಿದ್ದಾರೆ. ಅವರ ಈ ಲೇಖನ ಓದುಗರ ಮನ ಮುಟ್ಟುವುದು. ಅವರ ತಾಯಿ ಅವರ ಮದುವೆಯಲ್ಲಿ ಇರಲ್ಲಿಲ್ಲ ಎಂಬ ವಾಕ್ಯ ಓದುಗರ ಮನಮುಟ್ಟುವುದು.

About the Author

ಸುಧಾ ಸರನೋಬತ್

ಲೇಖಕಿ ಸುಧಾ ಸರನೋಬತ್ ಮೂಲತಃ ವಿಜಾಪುರ(ವಿಜಯಪುರ) ಜಿಲ್ಲೆಯವರು. ಕಳೆದ ಐದು ದಶಕಗಳಿಂದ ಹಾಸ್ಯ ಲೇಖನಗಳನ್ನು, ಲಘು ಪ್ರಬಂಧಗಳನ್ನು ಬರೆಯುತ್ತಿದ್ದು, ಅವರ ಬರೆಹಗಳು ಜನಪ್ರಿಯ ವಾರ ಪತ್ರಿಕೆಗಳಾದ ಸುಧಾ, ಕರ್ಮ ವೀರ, ತರಂಗ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಅಲ್ಲದೆ ‘ಚಿನ್ನದಂತ ಗಂಡ’, ‘ಅರ್ಧಾಂಗಿಯ ಅನರ್ಥ ಕೋಶ’ , ‘ಹೆಸರಿನಲ್ಲೇನಿದೆ ಮಹಾ’, ‘ಕೊರೊನಾ ಟೈಮ್ಸ್’ ಎಂಬ ಹಾಸ್ಯ ಲೇಖನ ಸಂಕಲನಗಳು ಪ್ರಕಟಗೊಂಡಿವೆ. ಇವರ ‘ಚಿನ್ನದಂತ ಗಂಡ’ ಹಾಸ್ಯ ಸಂಕಲನಕ್ಕೆ ‘ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’, ಹಾಗೂ ಸಮಗ್ರ ಹಾಸ್ಯ ಸಾಹಿತ್ಯಕ್ಕೆ ಗೋರೂರು ಪ್ರಶಸ್ತಿ, " ಉದರಾಯಣ " ಪ್ರಬಂಧಕ್ಕೆ ಮಾಹಾರಾಷ್ಟ್ರದ ಡೊಂಬಿವಲಿ ...

READ MORE

Related Books