ಕನ್ನಡದ ಸರ್ವಶ್ರೇಷ್ಠ ಕವಿಗಳಾದ ರತ್ನಾಕರ ಹಾಗೂ ಮುದ್ದಣ್ಣ ಅವರ ಸಾಹಿತ್ಯದಿಂದ ಆಯ್ದ ನಗೆ ಪ್ರಸಂಗಗಳನ್ನು ಸಂಕಲಿಸಿ ಸಿದ್ಧಪಡಿಸಿದ ಕೃತಿಯೇ-ನಮ್ಮ ನಗೆಗಾರರು. ಜೆ.ಪಿ. ರಾಜರತ್ನಂ ಅವರು ಸಂಪಾದಿಸಿದ್ದು, ಕಾವ್ಯದಲ್ಲಿಯ ಹಾಸ್ಯವನ್ನು ಪರಿಚಯಿಸುತ್ತವೆ. ಈ ಹಿಂದೆ ಇತರೆ ಕನ್ನಡ ಕವಿಗಳ ಸಾಹಿತ್ಯದ ಹಾಸ್ಯ ಪರಿಚಯಕ್ಕಾಗಿ ಇದೇ ಲೇಕಕರು ‘ನಕ್ಕಳಾ ತಾಯಿ’ ಎಂಬ ಕೃತಿಯನ್ನು ಬರೆದಿದ್ದರು. ಅದೇ ಸ್ವರೂಪದಲ್ಲಿ ‘ನಮ್ಮ ನಗೆಗಾರರು’ ಕೃತಿ ಇದೆ. ಕವಿವಲ್ಲಭ, ರತ್ನಾಕರ, ನಗೆಗಾರರಿವರಿಬ್ಬರೇ, ಮದನಮದಭಂಗ, ಪುರಾಣಮಿತ್ಯೇವ ನ ಸಾಧು ಸರ್ವಂ, ಅಪೂರ್ವ ಪುರುಷ ರತ್ನಾಕರ, ಶ್ರೀ ರಾಮಾಶ್ವಮೇಧ ಹಾಗೂ ಕಾಂತಾಸಮ್ಮಿತತಯಾ ಉಪದೇಶ ಹೀಗೆ ಒಟ್ಟು 8 ಶೀರ್ಷಿಕೆಯಡಿ ಕವಿಗಳ ಸಾಹಿತ್ಯದ ಹಾಸ್ಯವನ್ನು ಪರಿಚಯಿಸಿದ್ದಾರೆ.
©2024 Book Brahma Private Limited.