ಲೇಖಕ ಹಾಗೂ ವ್ಯಂಗ್ಯಚಿತ್ರ ಕಲಾವಿದ ಜಿ.ವಿ. ಗಣೇಶಯ್ಯ ಅವರ ನೆಗೆ ಬರಹಗಳಿರುವ ಕೃತಿ-ಶೃಂಗೇರಿ ಉಪಚಾರ. ನಗೆಗಳಲ್ಲಿ ವಿವಿಧ ಬಗೆ. ಬೇರೆ ಬೇರೆ ಅರ್ಥಗಳನ್ನು ಸ್ಫುರಿಸುತ್ತದೆ. ನಗು ಆರೋಗ್ಯಕ್ಕೆ ಪೂರಕವಾಗಿರಬೇಕು. ಹೇಗೆ ಮಗುವಿನ ತಿಳಿ ನಗೆ ವಂತೆ ಮನಸ್ಸಿಗೆ ಉಲ್ಲಾಸ-ಮುದ ನೀಡುತ್ದೋ ಹಾಗೆ ನಗೆ ಇರಬೇಕು ಎಂದು ಲೇಖಕರು ಆಶಿಸುತ್ತಾರೆ. ಕೆಲವೊಬ್ಬರ ನಗೆಗಳು ಇತರರ ಮನಸ್ಸನ್ನು ನೋಯಿಸುತ್ತದೆ ಎಂಬ ಬಗ್ಗೆ ಹಾಸ್ಯವಾಗಿಯೇ ವಿವರಿಸುತ್ತಾರೆ. ಇನ್ನು ಕೆಲವರಂತೂ ತುಟಿ ಬಿಗಿದುಕೊಂಡೇ ನಗುತ್ತಾರೆ. ಘನ ಗಂಭೀರ ವಾತಾವರಣವಿರಲಿ, ಅಲ್ಲೊಂದು ನಗೆ ಬಾಂಬು ಬಿದ್ದರೆ ಯಾವ ಅನಾಹುತವೂ ಆಗದೆ, ಆಗಿರುವ ಘೋರ ಅನಾಹುತ ತಿಳಿಯಾಗುತ್ತದೆ ಎನ್ನುತ್ತಾರೆ ಲೇಖಕರು. ಹಾಸ್ಯ ಅಪಹಾಸ್ಯ ಆಗಬಾರದು; ದ್ರೌಪದಿಯ ನಗೆಯಂತೆ ಕುರುಕ್ಷೇತ್ರವಾಗಬಾರದು. ನಗುವಿಗೂ-ನಗೆಪಾಟಲಿಗೂ ಅಜಗಜಾಂತರ ಇರಲಿ. ಇಲ್ಲವಾದರೆ ಕಾದಿದೆ ಗಂಡಾಂತರ! ಇಂತಹ ಸಂಗತಿಗಳನ್ನು ವಸ್ತುವಾಗಿಸಿಕೊಂಡ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
©2025 Book Brahma Private Limited.