ರಾವಣನಿಗೆ ಸಿಟ್ಟು ಏಕೆ ಬರುತ್ತದೆ? ಎಂಬುದು ಹಿಂದಿ ಮೂಲದ ಪ್ರಸಿದ್ಧ ಲೇಖಕ ವಿಮಲ್ ಕುಮಾರ್ ಅವರ ಕೃತಿಯನ್ನು ಲೇಖಕ ಡಿ.ಎನ್. ಶ್ರೀನಾಥ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ವ್ಯಂಗ್ಯಭರಿತ ಬರಹಗಳ ಸಂಕಲನವಿದು. ಮೇಲ್ನೋಟಕ್ಕೆ ನಗೆ ಬರಹಗಳಂತೆ ಕಂಡು ಬಂದರೂ ಸಾಮಾಜಿಕ ಮೌಢ್ಯವನ್ನು, ಅಜ್ಞಾನದ ನಡೆಯನ್ನು, ಅರ್ಥರಹಿತ ಆಚರಣೆಗಳನ್ನು ವ್ಯಂಗ್ಯವಾಡುತ್ತವೆ. ಈ ಆಂತರಿಕ ಸತ್ವದ ಹಿನ್ನೆಲೆಯಲ್ಲಿ ಈ ಬರಹಗಳು ಬಹು ಚರ್ಚಿತ ವಿಷಯಗಳಾಗಿದ್ದು, ಬದುಕಿನಲ್ಲಿ ಮಾರ್ಗದರ್ಶನ ನೀಡುವಂತೆಯೂ ಇವೆ.
©2025 Book Brahma Private Limited.