ಗಂಗಾವತಿ ಪ್ರಾಣೇಶ ಅವರು ಹಾಸ್ಯಕ್ಕೆ ಹೆಸರುವಾಸಿಯಾದವರು. ಹಾಸ್ಯದಲ್ಲಿ ಹಲವು ಒಳಹೊಳಹು ಇರುವ ದೃಷ್ಟಾಂತಗಳನ್ನು ಹೇಳುವುದೂ ಅವರ ಜನಪ್ರಿಯತೆಗೆ ಕಾರಣ. ಅಂಥ ದೃಷ್ಟಾಂತಗಳ ಸಂಗ್ರಹವನ್ನು ಅಕ್ಷರ ಲೋಕಕ್ಕೆ ಅರ್ಪಿಸಿದ್ದಾರೆ. ಪ್ರಾಣೇಶ ಅವರು ಹರಿಕಥೆ, ಪುರಾಣ ಪ್ರವಚನಗಳನ್ನು ಕೇಳಿ, ಪ್ರಭಾವಿತರಾದವರು. ಜೀವನದೊಳಗಿನ ಹಾಸ್ಯರಸ ಹೇಗೆ ಅಂತಃಕರಣಕ್ಕೆ ತಾಗುತ್ತದೆ ಎನ್ನುವುದನ್ನು ಹತ್ತಿರದಿಂದ ಬಲ್ಲವರು. ನಾಲ್ಕು ಭಾಗಗಳಲ್ಲಿ ಪ್ರಕಟವಾದ ಈ ಪುಸ್ತಕ ಸನ್ನಡತೆಯಲ್ಲಿ ನಡೆಯಲು ಬಯಸುವ ಯುವಕರಿಗೆ ಉತ್ತಮ ಕೈಪಿಡಿ ಕೂಡ.
©2025 Book Brahma Private Limited.