ಲೇಖಕ ಪ್ರಕಾಶ್ ನಾಡಿಗ್ ಅವರ ಕೃತಿ-ಪ್ರಳಯಾಂತಕರು ಹಾಗೂ ಇತರ ಹಾಸ್ಯ ಲೇಖನಗಳು. ಖ್ಯಾತ ಹಾಸ್ಯ ಲೇಖಕ ಎಚ್.ಡುಂಡಿರಾಜ್ ಅವರು ಕೃತಿಗೆ ಬೆನ್ನುಡಿ ಬರೆದು ‘ ಪ್ರಕಾಶ್ ನಾಡಿಗ್ ಅವರಲ್ಲಿ ಹಾಸ್ಯ ಬರಗಾರರು ಸಾಮಾನ್ಯವಾಗಿ ಬಳಸುವ ಉತ್ತೇಕ್ಷೆ, ವ್ಯಂಗ್ಯ, ವಿಡಂಬನೆ ಮತ್ತು ವಿರೋಧಾಭಾಸಗಳು ಸಾಕಷ್ಟಿವೆ. ನಗೆಬರಹಕ್ಕೆ ಅವರು ಆಯ್ದುಕೊಂಡ ವಸ್ತುಗಳೂ ಸಹ ಹಾಸ್ಯಲೇಖಕರಿಗೆ ಪ್ರಿಯವಾದ ಹೆಂಡತಿ, ಕೆಲಸದವಳು, ಟಿವಿ, ಕನಸು ಇತ್ಯಾದಿ. 2012ರ ಡಿಸೆಂಬರ್‌ನಲ್ಲಿ ಪ್ರಳಯ ಆಗಿಯೇಬಿಡುತ್ತದೆ ಎಂಬಂತೆ ನಮ್ಮ ನ್ಯೂಸ್ ಚಾನೆಲ್‌ಗಳು ಬಿಂಬಿಸಿ, ಅಮಾಯಕ ವೀಕ್ಷಕರನ್ನು ನಂಬಿಸಿ ಒಳ್ಳೆಯ ಟಿಆರ್‌ಪಿ ಪಡೆದುಕೊಂಡಿದ್ದವು. ಈ ಕುರಿತು ಪ್ರಕಾಶ್ ನಾಡಿಗರು ಪಳಯಾಂತಕರು ಎಂಬ ಸೊಗಸಾದ..ನಗೆಲೇಖನ ಬರೆದಿದ್ದಾರೆ. 2012ರಲ್ಲಿ ಪ್ರಳಯ ಆಗಲಿಲ್ಲವಾದರೂ ನ್ಯೂಸ್ ಚಾನಲ್‌ಗಳಲ್ಲಿ ಪ್ರಳಯಾಂತಕರ ಹಾವಳಿ ನಿಂತಿಲ್ಲ. ಅವರು ಮರಣ ಮೃದಂಗ, ರಕ್ಷಕ ಸರ್ವನಾಶ ಎಂದೆಲ್ಲ ಜನರನ್ನು ಹೆದರಿಸಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಹೊಸ ಹೊಸ ವಿಷಯಗಳನ್ನು ಹುಡುಕುತ್ತಲೇ ಇರುತ್ತಾರೆ. ಮುರಾಣದ ಕಥೆ ಮತ್ತು ಪಾತ್ರಗಳನ್ನು ವರ್ತಮಾನದ ಕಣ್ಣಿಂದ ನೋಡಿ ಹಾಸ್ಯ ಹೊಮ್ಮಿಸುವ ನಗೆಲೇಖಕರಿಗೆ ಪ್ರಿಯವಾದ ಇನ್ನೊಂದು ತಂತ್ರವನ್ನೂ ನಾಡಿಗರು ಬಳಸಿದ್ದಾರೆ. ಟೀ ಕಾಫಿ ಮರಾಣ ಎಂಬ ಲೇಖನ ಹರಟೆಗೆ ಹತ್ತಿರವಾಗಿದ್ದು, ಅಲ್ಲಿ ಲೇಖಕರು ಪದಗಳ ಆಟದ ಮೂಲಕ ಹಾಸ್ಯವನ್ನು ಹೊಮ್ಮಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.