‘ಪಾರುಪತ್ತೇದಾರರ ಕೋಟು’ ಕೃತಿಯು ಲೋಕನಾಥ ದೀಕ್ಷಿತ್ ಅವರ ಹಾಸ್ಯ ಬರಹಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ವೈ.ಎನ್. ಗುಂಡೂರಾವ್ ಅವರು, ಕಮರ್ಷಿಯಲ್ ಸಿನೆಮಾದಂತೆ ಎಲ್ಲ ವರ್ಗದವರನ್ನೂ ತಲುಪುವ ಹಾಸ್ಯ ಸರ್ವ ಜನಪ್ರಿಯ. ಹಾಸ್ಯ ಪ್ರಹಸನಗಳು, ಕಾದಂಬರಿಗಳು, ಲೇಖನಗಳು, ಇತ್ಯಾದಿ ಮೂಲಕ ರಂಜಿಸಿದ ದಾಶರಥಿ ದೀಕ್ಷಿತರಂತೆಯೇ ಹಾಸ್ಯ ಸಾಹಿತ್ಯ ಕ್ಷೇತ್ರವನ್ನಾಯ್ದುಕೊಂಡ ಲೋಕನಾಥ ದೀಕ್ಷಿತರ ರಕ್ತದಲ್ಲೂ ಹರಿಯುತ್ತಿರುವುದು ಹಾಸ್ಯದ ಕಣಗಳೇ. ನಿತ್ಯದ ಘಟನೆಗಳಿಗೇ ಅನಿರೀಕ್ಷಿತ ತಿರುವು ನೀಡಿ ಹಾಸ್ಯ ಹೊಮ್ಮಿಸುವ ಲೋಕನಾಥರ ಶೈಲಿ, ಮೊದಲ ಓದಿಗೇ ಓದುಗರನ್ನು ಆಕರ್ಷಿಸುತ್ತದೆ. ಇಲ್ಲಿಯ ‘ಸ್ಕ್ಯಾಮ್ ವಂತರು’ ‘ಬಂಗಾಳಿ ಬೀಗ್ರು’ ಇತ್ಯಾದಿ ಲೇಖನಗಳ ಹಾಸ್ಯ ಹೊಟ್ಟೆ ಹುಣ್ಣಾಗಿಸುತ್ತದೆ. ಯಾರಿಗೂ ನೋವಾಗದಂತೆ, ನವಿರಾದ ಶೈಲಿಯಲ್ಲಿ ಮಿಡಿಯುವ ಲೋಕನಾಥ ದೀಕ್ಷಿತರ ಹಾಸ್ಯ ಬರಹಗಳು ಒಂದು ಹಂತದಲ್ಲಿ ತಂದೆ ದಾಶರಥಿ ದೀಕ್ಷಿತರನ್ನೂ ಮೀರಿಸುತ್ತವೆ. ಬರೆದದ್ದು ಕಡಿಮೆಯಾದರೂ ಇನ್ನೂ ಬರೆಯಬೇಕಿತ್ತಲ್ಲ ಎನ್ನಿಸುವ ಇವರ ಶೈಲಿ ವಂಶ ಪಾರಂಪರಿಕವಾದದ್ದು' ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.