ನರಿ ಮತ್ತು ಮೇಕೆ ಒಮ್ಮೆ ನರಿಯು ಊರ ಕಡೆಗೆ ಬೇಟೆಗೆಂದು ಬಂದಿತು ಊರ ಬಳಿಯಿಲಿದ್ದ ಪುಟ್ಟ ಬಾವಿಯೊಳಗೆ ಬಿದ್ದಿತು ಹತ್ತು ಅಡಿಯ ಆಳವಿದ್ದ ಪುಟ್ಟ ಬಾವಿಯೊಳಗಡೆ ಇತ್ತು ಸ್ವಲ್ಪ ಮಾತ್ರ ನೀರು ಮುಳುಗಲಿಲ್ಲ ತಳದೆಡೆ ಬಾವಿಯಿಂದ ಮೇಲೆ ಬರಲು ಇರಲೇ ಇಲ್ಲ ಮೆಟ್ಟಿಲು ಎಷ್ಟೇ ಯತ್ನ ಪಟ್ಟರೂನು ಆಗಲಿಲ್ಲ ಹತ್ತಲು ಅಷ್ಟರಲ್ಲಿ ಬಾವಿ ಬಳಿಗೆ ಮೇಕೆಯೊಂದು ಬಂದಿತು “ಅಯ್ಯಾ ನರಿಯೆ ಬಾವಿಯಲ್ಲಿ ಏಕೆ ಬಿದ್ದೆ ?” ಎಂದಿತು ಮೇಕೆ ಮಾತು ಕೇಳಿ ನರಿಯು ಮನದಿ ಬಹಳ ನಾಚಿತು ಆದರೂನು ತೋರಗೊಡದೆ ನಗುತ ಹೀಗೆ ನುಡಿಯಿತು- “ಗೆಳೆಯ ನಾನು ಬೀಳಲಿಲ್ಲ ಜಳಕ ಮಾಡುತಿರುವೆನು ಆಹಾ! ಎಂಥ ಸುಖವು ಇಲ್ಲಿ ನೀನೂ ಬರುವೆಯೇನು? ನರಿಯ ಮಾತು ಕೇಳಿ ಮೇಕೆ ಬಾವಿಯೊಳಗೆ ಜಿಗಿಯಿತು ಮೇಕೆ ಬೆನ್ನ ಮೇಲೆ ಹತ್ತಿ ನರಿಯು ಹೊರಗೆ ನೆಗೆಯಿತು! (ಕೃತಿಯೊಳಗಿಂ
©2025 Book Brahma Private Limited.