ಹಿರಿ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರ ನಗೆಬರಹಗಳ ಸಂಕಲನ-ನಗುವೆ ಅಮೃತ. ಈಗ ಈ ಸಮಯದಲ್ಲಿ ನಗುವಿಗೆ ಬರ ಬಂದಿದೆ. ಯಾರ ಮೊಗದಲ್ಲೂ ನಗು ಕಾಣುವುದಿಲ್ಲ. ನಗುವಿಲ್ಲದೆ ಬದುಕಿಲ್ಲ. ನಮ್ಮ ಆರೋಗ್ಯ ಬಾಳಿಗೆ ನಗುವೇ ಅಮೃತ. ಆದರೆ ಇದನ್ನು ಇವತ್ತು ಅರ್ಥೈಸಿಕೊಳ್ಳುವರು ತುಂಬಾ ಕಡಿಮೆಯಾಗಿದೆ .ಇವತ್ತು ಎಲ್ಲರಿಗೂ ಟೆನ್ಷನ್ ಕಾಡುತ್ತಿದೆ .ಟೆನ್ಷನ್ ಎಂಬುದು ಒಂದು ರೀತಿಯಲ್ಲಿ ರೋಗವೆಂದರೆ ಅತಿಶಯೋಕ್ತಿಯೇನಲ್ಲ.ಸರ್ವೇಸಾಮಾನ್ಯವಾಗಿ ಜವಾಬ್ದಾರಿಯುಳ್ಳ ವ್ಯಕ್ತಿಯು ಇವತ್ತಿನ ದಿನಗಳಲ್ಲಿ ನಗದೇ ಇರುವುದು ಇವರಿಗೆ ಹಿಡಿದ ಗ್ರಹಣ ವೆಂದೇ ಹೇಳಬಹುದು. ಟೆನ್ಷನ್ ಕಾರಣವಾಗಿ ಮಾನವನಿಗೆ ಅನೇಕ ರೋಗಗಳು ಬರುತ್ತಿವೆ . ರಕ್ತದೊತ್ತಡ ,ಸಕ್ಕರೆ ಕಾಯಿಲೆ ,ಮೆದುಳು ಗಡ್ಡೆ ರೋಗ ಇವೆಲ್ಲವೂ ಈ ಟೆನ್ಷನ್ನಿಗೆ ಕಾರಣವಾಗಿರಬಹುದು.ಸಮಾಜದ ಜನಪದರಲ್ಲಿ ಇಣುಕಿದಾಗ ಮಗು ಸುಮಾರು ಸಲ ನಗುತ್ತದೆ ಆದರೆ ಮನುಷ್ಯನಾದವನು ನಗುವನ್ನೇ ಮರೆತುಬಿಡುತ್ತಾನೆ.ನಗುವಿನಿಂದಾಗಿ ನಮ್ಮ ನರನಾಡಿಗಳ ಬಿರುಸುತನ ಮಾಯವಾಗುತ್ತದೆ. ಆರೋಗ್ಯದಾಯಕ ನಗುವಿನಿಂದಾಗಿ ಆತ್ಮಕ್ಕೆ ಹೊಸ ಚೈತನ್ಯ ಕಳೆ ಬರುತ್ತದೆ. ಆ ನಿಟ್ಟಿನಲ್ಲಿ ಇಲ್ಲಿನ ಅನೇಕ ನಗೆಹನಿಗಳು ಬದುಕಿಗೆ ಒಂದಿಷ್ಟು ನೆಮ್ಮದಿಯ ಬೆಳಕನ್ನು ಹರಿಸುತ್ತವೆ ಎಂದು ಲೇಖಕರು ಹೇಳಿಕೊಂಡಿದ್ದಾರೆ.
©2024 Book Brahma Private Limited.