ಮೋದಕ

Author : ವೈ.ಸತ್ಯನಾರಾಯಣ

Pages 122

₹ 100.00




Year of Publication: 2011
Published by: ವಿಜ್ಯೋಶಿಜ ಪ್ರಕಾಶನ
Address: ಎಸ್.ಡಿ.ರಸ್ತೆ, ಕಾಸರಗೋಡು-671121
Phone: 9400520662

Synopsys

ವೈ.ಸತ್ಯನಾರಾಯಣ ಅವರ ಎರಡನೇ ನಗೆ ಬರಹಗಳ ಸಂಕಲನ ಮೋದಕ. ಸಾಹಿತಿ ವಿ.ಬಿ.ಅರ್ತಿಕಜೆ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಹಾಸ್ಯ ಸಾಹಿತಿ ಹರೀಶ್ ಪೆರ್ಲ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅರ್ತಿಕಜೆಯವರು ಹೇಳುವಂತೆ, ಮೋದಕ ಎನ್ನುವಂತ ಶೀರ್ಷಿಕೆ ಈ ಕೃತಿಗೆ ಚೆನ್ನಾಗಿ ಒಪ್ಪುತ್ತದೆ. ಆರೋಗ್ಯಕರವಾದ ಸಿಹಿತಿಂಡಿಯಾದ ಮೋದಕದಂತೆ ಈ ಸಂಕಲನವನ್ನು ಓದುಗರು ರುಚಿನೋಡಿ ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ಅಲ್ಲದೆ ಅವರಿಗೆ ಸಂತೋಷವನ್ನೂ ಉಂಟುಮಾಡಲು ಶಕ್ತವಾಗಿದೆ ಎಂಬುದಾಗಿ ಹೇಳಿದ್ದಾರೆ.

About the Author

ವೈ.ಸತ್ಯನಾರಾಯಣ
(05 October 1940)

ವೈ.ಸತ್ಯನಾರಾಯಣ ಅವರ ತಾಯಿ ಪರಮೇಶ್ವರಿ, ತಂದೆ ವೈ.ಪರಮೇಶ್ವರ್. ಎಂ.ಎ, ಎಂ.ಎಡ್ ಪದವೀಧರರಾಗಿರುವ ಇವರು 1960ರಿಂದ 1968ರ ವರೆಗೆ ಕೆಳದರ್ಜೆ ಗುಮಾಸ್ತನಾಗಿ ಸೇವೆ ಸಲ್ಲಿಸಿದ್ದಾರೆ. 1968ರಿಂದ 1996ರ ವರೆಗೆ ಪ್ರೌಢಶಾಲಾ ಶಿಕ್ಷಕ, 1996ರಿಂದ 1999ರ ವರೆಗೆ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ. ಅನಂತರ ಅಲ್ಪ ಸಮಯ ಬಿ.ಎಡ್. ಕೇಂದ್ರದಲ್ಲಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ.  ಸಾಹಿತ್ಯ : 2002ರಲ್ಲಿ ನೌಕರಿಯಿಂದ ಸಂಪೂರ್ಣವಾಗಿ ನಿವೃತ್ತನಾದ ಮೇಲೆ ಸಾಹಿತ್ಯ ಕೃಷಿ ಆರಂಭಿಸಿ, ನಗೆ ಹನಿಗಳಿಂದ ಬರವಣಿಗೆ ಪ್ರಾರಂಭಿಸಿದರು. ಈವರೆಗೆ 11 ಕೃತಿಗಳನ್ನು ಬರೆದು ಪ್ರಕಟಿಸಿದ್ದರೆ ಮೊದಲನೆಯ ಕೃತಿ ಪುನರ್ ಮುದ್ರಣಗೊಂಡಿದೆ. 05-10-2019ರಂದು  ‘ಹಾಸ್ಯ ತಪಸ್ವಿ’ ಎಂಬ ...

READ MORE

Related Books