ಮಹಾತ್ಮಾ ವರ್ಸಸ್ ಗಾಂಧಿ

Author : ಡಿ.ಎನ್‌. ಶ್ರೀನಾಥ್‌

₹ 300.00




Published by: ವಂಶಿ ಪ್ರಕಾಶನ
Phone: 9741613073

Synopsys

ಗಾಂಧೀಜಿಯವರ ಮಗ ಹರಿಲಾಲನ ದುರಂತ ಜೀವನ ಹಾಗು ಗಾಂಧಿಯವರ ಜೀವನದ ಮಾರ್ಮಿಕ ಮತ್ತು ಕರುಣಾಜನಕ ಮಗ್ಗುಲನ್ನು ಬಿಂಬಿಸುವ ಗುಜರಾತಿ ಕಾದಂಬರಿ. ಮೂಲ ದಿನಕರ ಜೋಶಿ, ಕನ್ನಡಕ್ಕೆ ಅನುವಾದ ಡಿ. ಏನ್ ಶ್ರೀನಾಥ್. ಗುಜರಾತಿ ಭಾಷೆಯಲ್ಲಿರುವ ದಿನಕರ್ ಜೋಶಿಯವರ 'ಮಹಾತ್ಮಾ ವರ್ಸಸ್ ಗಾಂಧಿ' ಕಾದಂಬರಿ, ಅಲ್ಲಿಂದ ಹಿಂದಿಗೆ ಅನುವಾದಗೊಂಡು, ಇದೀಗ ಕನ್ನಡದ ತಾವನ್ನೂ ಹುಡುಕಿಕೊಂಡು ಬಂದಿದೆ. ಗಾಂಧೀಜಿಯವರ ಬಗ್ಗೆ ಅನೇಕ ಕೃತಿಗಳು ಬಂದಿದ್ದರೂ, ಈ ಕೃತಿ ವಿಶೇಷ ವಸ್ತುವನ್ನು ಹೊಂದಿದೆ. ಈ ಕಾದಂಬರಿಯಲ್ಲಿ ಅವರ ಜೇಷ್ಠ ಪುತ್ರ ಹರಿಲಾಲರ ವ್ಯಕ್ತಿತ್ವ ಮತ್ತು ಬದುಕಿನ ದುರಂತ ಚಿತ್ರಣವಿದೆ, ಜೊತೆಗೆ ಗಾಂಧೀಜಿಯವರ ಜೀವನದ ಮಾರ್ಮಿಕ ಮತ್ತು ಕರುಣಾಜನಕ ಮಗ್ಗಲನ್ನೂ ಈ ಕಾದಂಬರಿ ಬಿಂಬಿಸಿದೆ . ದಿನಕರ ಜೋಶಿ ಅವರು ಬರೆದಿದ್ದ ಮೂಲ ಕಾದಂಬರಿ ಗುಜರಾತಿನ ಪತ್ರಿಕೆಗಳಲ್ಲಿ ಹಲವು ಪ್ರಕಟಗೊಂಡಿತ್ತು. ಡಿ.ಎನ್. ಶ್ರೀನಾಥ್ ಅವರು ಅನುವಾದಿಸಿದ ಈ ಕಾದಂಬರಿ`ಬೆಳಕಿನ ನೆರಳು' ಎಂಬ ಶೀರ್ಷಿಕೆಯಡಿ 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಂದು ಹರಿಲಾಲರ ಹೆಸರು ಯಾರಿಗಾದರೂ ನೆನಪಿದ್ದರೆ ಅದು ಬಹುಶಃ ಅವರ ಅದೃಷ್ಟವೇ ಸರಿ! ರಾಜಾಜಿ ಮತ್ತು ಕಿಶೋರಿಲಾಲರ ಮಾತಿರಲಿ, ಜನ ಬಾಪೂರವರನ್ನೂ ಮರೆತಿದ್ದಾರೆ' ಎಂದು ದಿನಕರ್ ಜೋಶಿಯವರು ಮುನ್ನುಡಿಯಲ್ಲಿ ಉಲ್ಲೇಖಿಸುತ್ತಾರೆ. 'ಹರಿಲಾಲರ ಬಗ್ಗೆ ಗ್ರಂಥಗಳಲ್ಲಿ ಅಥವಾ ಬೇರೆ ಕಡೆಗಳಿಂದ ಸಿಕ್ಕ ಸಾಮಾಗ್ರಿಗಳಲ್ಲಿ ನಿರಂತರತೆಯ ಕೊರತೆಯಿದೆ. ಎಲ್ಲ ವಿವರಗಳೂ ಅಸ್ತವ್ಯವಸ್ತವಾದಂತಿವೆ. ಅನೇಕ ಸ್ಥಳಗಳಲ್ಲಿ ವಿರೋಧಾಭಾಸವೂ ಇದೆ' ಎನ್ನುತ್ತಾ, ಇವನ್ನೆಲ್ಲ ಕಾದಂಬರಿ ಮಿತಿಯೊಳಗೆ ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ ಜೋಶಿ. ಮೂವತ್ತೆಂಟು ಅಧ್ಯಾಯದಲ್ಲಿ ತೆರೆದುಕೊಳ್ಳುವ ಕೃತಿ, ಮಹಾತ್ಮನ ಕುಟುಂಬದ ಚರಿತ್ರೆಯ ಪುಟಗಳನ್ನು ಕಣ್ಮುಂದೆ ತರುತ್ತಾ ಹೋಗುತ್ತದೆ. ಶ್ರೀನಾಥ್ ಅವರ ಭಾಷಾಂತರದ ಸರಳ ಭಾಷೆ ಓದಿಗೆ ಪೂರಕವಾಗಿದೆ.

About the Author

ಡಿ.ಎನ್‌. ಶ್ರೀನಾಥ್‌
(03 December 1950)

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...

READ MORE

Related Books