‘ಸಂಶೋಧನೆಯ ಹಾದಿ' ದೇವಿಪ್ರಸಾದ್ ಚಟ್ಟೋಪಾಧ್ಯಾಯ’ ಜಿ. ಕುಮಾರಪ್ಪ ಅವರ ಅನುವಾದಿತ ಕೃತಿಯಾಗಿದೆ. ಜ್ಞಾನ ಸಂಪಾದನೆ - ವಿಜ್ಞಾನದ ಸಂಶೋಧನೆಗಳೆಂಬ ಎರಡು ದಾರಿಗಳನ್ನು ವಿಸ್ಮಯಕರವಾಗಿ ಕ್ರಮಿಸುತ್ತ ಬಂದ ಮಾನವನ ಸಾಮಾಜಿಕ ವ್ಯವಸ್ಥೆ ಸಾಕಷ್ಟು ಪರಿವರ್ತನೆಗಳನ್ನೂ ಕಂಡಿದೆ. ಅಂದಿನ ಮಾನವ ಪ್ರಕೃತಿಯನ್ನು ಅರ್ಥೈಸುವಲ್ಲಿ ಕೆಲವೊಂದು ತಪ್ಪು ತಿಳುವಳಿಕೆಗಳಿದ್ದು ಕ್ರಮೇಣ ಸಮಾಜದಲ್ಲಿ ಅವು ಧಾರ್ಮಿಕ ಮುಸುಕಿನಡಿ ಬಲವಾಗಿ ಬೇರೂರ ತೊಡಗಿದವು. ಹೀಗೆ ಅಂದಿನ ಅರ್ಥಹೀನ ಅವೈಜ್ಞಾನಿಕ ನಂಬಿಕೆಗಳನ್ನು ಅಲುಗಾಡಿಸಲು ಪ್ರಯತ್ನಿಸುತ್ತಿದ್ದ ಪ್ರಯೋಗಶೀಲ ವೈಜ್ಞಾನಿಕ ಸಂಶೋಧನೆಗಳು ಪ್ರಾರಂಭದಲ್ಲಿ ಭಾರೀ ಪ್ರತಿರೋಧವನ್ನು ಎದುರಿಸಬೇಕಾಯಿತು.
ಹೊಸತು-2004- ಡಿಸೆಂಬರ್
ಜ್ಞಾನ ಸಂಪಾದನೆ - ವಿಜ್ಞಾನದ ಸಂಶೋಧನೆಗಳೆಂಬ ಎರಡು ದಾರಿಗಳನ್ನು ವಿಸ್ಮಯಕರವಾಗಿ ಕ್ರಮಿಸುತ್ತ ಬಂದ ಮಾನವನ ಸಾಮಾಜಿಕ ವ್ಯವಸ್ಥೆ ಸಾಕಷ್ಟು ಪರಿವರ್ತನೆಗಳನ್ನೂ ಕಂಡಿದೆ. ಅಂದಿನ ಮಾನವ ಪ್ರಕೃತಿಯನ್ನು ಅರ್ಥೈಸುವಲ್ಲಿ ಕೆಲವೊಂದು ತಪ್ಪು ತಿಳುವಳಿಕೆಗಳಿದ್ದು ಕ್ರಮೇಣ ಸಮಾಜದಲ್ಲಿ ಅವು ಧಾರ್ಮಿಕ ಮುಸುಕಿನಡಿ ಬಲವಾಗಿ ಬೇರೂರ ತೊಡಗಿದವು. ಹೀಗೆ ಅಂದಿನ ಅರ್ಥಹೀನ ಅವೈಜ್ಞಾನಿಕ ನಂಬಿಕೆಗಳನ್ನು ಅಲುಗಾಡಿಸಲು ಪ್ರಯತ್ನಿಸುತ್ತಿದ್ದ ಪ್ರಯೋಗಶೀಲ ವೈಜ್ಞಾನಿಕ ಸಂಶೋಧನೆಗಳು ಪ್ರಾರಂಭದಲ್ಲಿ ಭಾರೀ ಪ್ರತಿರೋಧವನ್ನು ಎದುರಿಸಬೇಕಾಯಿತು. ನಮ್ಮ ಕಾಲದ ಶ್ರೇಷ್ಠ ಚಿಂತಕ ದೇವಿಪ್ರಸಾದ್ ಚಟ್ಟೋಪಾಧ್ಯಾಯ ಇಲ್ಲಿನ ಬರವಣಿಗೆಯಲ್ಲಿ ಮಾನವನ ಏಳಿಗೆಯನ್ನು ಹಂತಹಂತವಾಗಿ ಗುರುತಿಸಿದ್ದಾರೆ. ಕೊನೆಗೆ ವಿಜ್ಞಾನದ ಹಾದಿಯಲ್ಲಿ ಆತ ಕೇವಲ ಸುಖವನ್ನು ಮಾತ್ರ ಅರಸುತ್ತ ವಿಜ್ಞಾನವನ್ನು ಉಳ್ಳವರ ಜೀತದಾಳಿನಂತೆ ದುಡಿಸುವ ಹಂತ ತಲುಪಿದ್ದನ್ನು ಒಂದು ಚರಿತ್ರೆಯನ್ನಾಗಿ ತಿಳಿಸಿದ್ದಾರೆ.
©2024 Book Brahma Private Limited.