ಕಲಾನಿಧಿ ಡಾ. ಸ್ವಾಮಿನಾಥ ಅಯ್ಯರ್ ಅವರ ಪ್ರಬಂಧಗಳ ಸಂಕಲನವನ್ನುಮೂಲ ತಮಿಳು ಭಾಷೆಯಿಂದ ಖ್ಯಾತ ಕಥೆಗಾರ ಡಾ. ಬಿ.ಜಿ.ಎಲ್. ಸ್ವಾಮಿ ಅವರು ‘ಬೆಳದಿಂಗಳಲ್ಲಿ ಅರಳಿದ ಮೊಲ್ಲೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಡಾ. ಸ್ವಾಮಿನಾಥ ಅಯ್ಯರ್ ಅವರು 40 ವರ್ಷಗಳಿಗೆ ಮೇಲ್ಪಟ್ಟು ಸೇವೆ ಸಲ್ಲಿಸಿದ ಉಪಾಧ್ಯಾಯರು. ಸಂಶೋಧನೆ, ಪಾಂಡಿತ್ಯ, ಸತತಾಭ್ಯಾಸಗಳಿಂದ ಹೆಸರುವಾಸಿ. ಬಿ.ಜಿ.ಎಲ್. ಸ್ವಾಮಿಯವರು ಅಯ್ಯರ್ ಅವರ ಸಾಹಿತ್ಯದ ಸೊಬಗನ್ನು ಇಲ್ಲಿ ನೀಡಿದ್ದಾರೆ. ಅವರ ಪ್ರಬಂಧಗಳಲ್ಲಿ ಕೆಲವನ್ನು ಆಯ್ದು, ಕನ್ನಡಿಸಿದ್ದಾರೆ. ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ ಮತ್ತು ಇತರ ಪ್ರಬಂಧಗಳ ಈ ಸಂಕಲನದಲ್ಲಿ ಗ್ರಂಥಸಂಪಾದನೆ, ಕವಿಕವಿತೆ, ಕಥಾನಕ, ಸಂಗೀತಕ್ಕೆ ಸಂಬಂಧಿಸಿದ ಅರಳಿದ ಮೊಗ್ಗುಗಳಿವೆ.
©2025 Book Brahma Private Limited.