ಮಹಾಡ್ ಕೆರೆ ಸತ್ಯಾಗ್ರಹ (ದಲಿತ ಚಳವಳಿಗಳ ಒರೆಗಲ್ಲು)-ಈ ಕೃತಿಯನ್ನು ಮೂಲತಃ ರಾಮಚಂದ್ರ ಬಾಬಾಜಿ ಮೋರೆ ಅವರು ಮರಾಠಿಯಲ್ಲಿ ಬರೆದಿದ್ದು, ಅದನ್ನು ಲೇಖಕ ಅಬ್ದುಲ್ ರೆಹಮಾನ್ ಪಾಷಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಕೃತಿಗೆ ಹೆಸರಾಂತ ಲೇಖಕ ಡಾ. ಆನಂದ ತೇಲ್ತುಂಬ್ದೆ ಸುದೀರ್ಘವಾದ ಮುನ್ನುಡಿ ಬರೆದಿದ್ದಾರೆ. ಭಾರತೀಯ ದಲಿತ ಚಳವಳಿಯ ಆರಂಭ ಹಾಗೂ ಮುಂದುವರಿದ ತೀವ್ರತೆ ಕುರಿತು ಹೇಳುವುದಾದಲ್ಲಿ ಮೊದಲು ಮಹಾಡ್ ಕೆರೆ ಚಳವಳಿಯನ್ನೇ ಪ್ರಸ್ತಾಪಿಸಲಾಗುತ್ತದೆ. ಈ ಘಟನೆಯೇ ದಲಿತ ವಿಮೋಚನೆಯ ಬೀಜಗಳಿವೆ. ಈ ಘಟನೆ ನಂತರ ದಲಿತ ಸಮೂಹ ವಿಭಿನ್ನ ರೀತಿಯಲ್ಲಿ ವಿಚಾರಿಸುವಷ್ಟು ಸಾಮರ್ಥ್ಯ ಪಡೆದುಕೊಂಡಿತು. ಅದು ದಲಿತರ ಸ್ವಾಭಿಮಾನವನ್ನು ಪ್ರೇರೇಪಿಸಿತು. ಈ ಎಲ್ಲ ಕಾರಣದಿಂದ, ಮಹಾಡ್ ಕೆರೆ ಸತ್ಯಾಗ್ರಹ, ಕೋರೆಗಾಂವ್ ದಾಳಿ ಇತ್ಯಾದಿ ಸನ್ನಿವೇಶಗಳು ದಲಿತರ ಚಳವಳಿಯ ಇತಿಹಾಸದಲ್ಲಿ ಎಂದೂ ಮರೆಯದ ನೆನಪುಗಳಾಗಿ, ಐತಿಹಾಸಿಕ ದಾಖಲೆಯಾಗಿ ಉಳಿದಿವೆ. ಮಹಾಡ್ ಕೆರೆ ಸತ್ಯಾಗ್ರಹದ ಹಿಂದಿನ ಕಾರಣ, ಚಳವಳಿಗೆ ಸಿಕ್ಕ ಬೆಂಬಲ, ಅದು ಪಡೆದುಕೊಂಡ ಸ್ವರೂಪ ಇತ್ಯಾದಿ ಕುರಿತು ಬರೆದ ಚಿಂತನೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
©2025 Book Brahma Private Limited.