ಲೇಖಕ ಬಿ. ಸುಜ್ಞಾನಮೂರ್ತಿ ಅವರ ಅನುವಾದಿತ ಕೃತಿ ‘ಪುರುಷ ಅಹಂಕಾರಕ್ಕೆ ಸವಾಲ್’. 1882ರಲ್ಲಿ ತಾರಾಬಾಯಿ ಶಿಂಧೆ ಅವರು ಮರಾಠಿಯಲ್ಲಿ ಬರೆದ ‘ಸ್ತ್ರೀಪುರುಷ ತುಲನಾ’ ಕೃತಿಯ ಅನುವಾದ ಕೃತಿಯಿದು. ಪ್ರತಿಯೊಂದು ದುರಾಚಾರಕ್ಕೆ, ಬಗೆಬಗೆಯ ದುರವಸ್ಥೆಗಳಿಗೆ ಭಾರತದಲ್ಲಿ ಮಹಿಳೆಯರನ್ನೇ ಯಾವಾಗಲೂ ಕಾರಣೀಭೂತರನ್ನಾಗಿ ಮಾಡುವುದನ್ನು ನೋಡಿದ ತಾರಾಬಾಯಿ ಕೆರಳಿದಳು. ಪುರುಷ ಅಹಂಕಾರಕ್ಕೆ ಸವಾಲು ಪುರುಷರೊಂದಿಗೆ ಮಹಿಳೆಯರ ಸಂಬಂಧಗಳ ಬಗ್ಗೆ ಚರ್ಚಿಸಿದ ಆಧುನಿಕ ಭಾರತದ ಮೊಟ್ಟಮೊದಲ ಸ್ತ್ರೀವಾದಿ ಚಿಂತನೆಯ ಪುಸ್ತಕ ಇದು.
©2025 Book Brahma Private Limited.