ಹಸಿದ ಕಲ್ಲು ಮತ್ತು ಇತರ ಕಥೆಗಳು

Author : ಶ್ರೀನಿವಾಸ ವಿ. ಸುತ್ರಾವೆ

Pages 160

₹ 50.00




Year of Publication: 2009
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ಹಸಿದ ಕಲ್ಲು ಮತ್ತು ಇತರ ಕಥೆಗಳು ಕಥಾಸಂಕಲನವನ್ನು ರವೀಂದ್ರನಾಥ್‌ ಠಗೋರ್‌ ಅವರು ರಚಿಸಿದ್ದು, ಇದರ ಕನ್ನಡನುವಾದವನ್ನು ಲೇಖಕ ಶ್ರೀನಿವಾಸ್‌ ವಿ. ಸುತ್ರಾವೆ ಅವರು ಮಾಡಿದ್ದಾರೆ. ಈ ಕೃತಿಯಲ್ಲಿ ಭಾರತಕ್ಕೆ ಮೊದಲ ನೊಬೆಲ್ ಪ್ರಶಸ್ತಿಯನ್ನು ಗಳಿಸಿಕೊಟ್ಟವರೂ, ಆಧುನಿಕ ಬಾರತದ ನಿರ್ಮಾಪಕರೂ, ಆದ ರವೀಂದ್ರನಾಥ ಠಾಕೂರರ ಕೃತಿಗಳೆಂದರೆ, ಅವು ವಿಶ್ವಕಾವ್ಯಕ್ಕೆ ಸೇರಿದ ಅಮೂಲ್ಯ ಕಾಣಿಕೆಗಳು. ಅವುಗಳಿಗೆ ಯಾವುದೇ ಕಾಲದ ಅಥವಾ ಪ್ರಾದೇಶಿಕ ನಿರ್ಬಂಧವಿಲ್ಲ. ಅವರ ಕೃತಿಗಳಲ್ಲಿ ಕವನಗಳಿವೆ, ನಾಟಕಗಳಿವೆ, ಕಥೆಗಳಿವೆ, ವೈಚಾರಿಕ ಬರಹಗಳಿವೆ, ಅವರ ಕವನಗಳಷ್ಟೆ ಕಥೆಗಳೂ ಪ್ರಸಿದ್ಧಿ ಪಡೆದುಕೊಂಡಿವೆ. ಸಾಮಾನ್ಯವಾಗಿ ಸಣ್ಣ ಕಥೆಗಳು ಘಟನಾ ಪ್ರಧಾನವಾಗಿರುತ್ತವೆ. ಜೀವನವನ್ನು ಮಾನವೀಯತೆಯನ್ನು ಚಿತ್ರಿಸುತ್ತಾ ಜೀವನದ ಬಗೆಗೆ ಚಿರಂತನವಾದ ದರ್ಶನವನ್ನು ಅವರ ಕಥೆಗಳು ಮಾಡಿಸುತ್ತವೆ. ಜೀವನದ ಮಹತ್ತರವಾದ ಅರ್ಥವನ್ನೂ ಬಿತ್ತರಿಸುತ್ತವೆ. ಹೃದಯ ಹಾಗೂ ಮನಸ್ಸುಗಳ ಅನಾವರಣ ಮಾಡುತ್ತವೆ. ಅವು ಮಾನವರ ಬದುಕನ್ನು ರೂಪಿಸುವ ಆಸೆ-ಆಕಾಂಕ್ಷೆ, ಕಷ್ಟ-ನಷ್ಟ, ಸುಖ-ದುಃಖ, ಸಂತೋಷ, ಕಾಯಿಲೆ, ಮರಣ, ದ್ವೇಷ, ಅಸೂಯೆ, ಪ್ರೀತಿ, ಸ್ನೇಹ, ಕಾತರ, ಆಶೋತ್ತರ, ಶಕ್ತಿ-ದೌರ್ಬಲ್ಯ, ಪೂರ್ವಗ್ರಹಗಳು, ವೈಷಮ್ಯಗಳು, ಸಂಕುಚಿತ ದೃಷ್ಟಿ, ಮಾನಸಿಕ ತುಮುಲಗಳು, ಗೊತ್ತುಗುರಿಗಳು, ಬಾಳಿನ ಹೃದಯಂಗಮತೆ ಮತ್ತು ವಿಕ್ಷಿಪ್ತತೆ ಮೊದಲಾದ ಮಾನವವ್ಯಾಪಾರಗಳ, ಮನೋರಾಗಗಳ ಸಂಗಮವಾಗಿವೆ. ಠಾಕೂರರ ಕಥೆಗಳು ಕಾವ್ಯಾತ್ಮಕತೆಯಿಂದಲೂ ಸಂವೇದನಶೀಲತೆಯಿಂದಲೂ ಭಾವಾನುಸಂಧಾನದಿಂದಲೂ ಗಮನ ಸೆಳೆಯುತ್ತವೆ. ಶ್ರೀಮಂತರಿಂದ ಭಿಕ್ಷುಕರವರೆಗೆ, ಪಂಡಿತರಿಂದ ಸಂನ್ಯಾಸಿಗಳವರೆಗೆ, ವೃದ್ಧರಿಂದ ಎಳೆವಯಸ್ಸಿನವರ ವರೆಗೆ ವಿಶಾಲವೂ ವೈವಿಧ್ಯಮಯವೂ ಆದ ಪಾತ್ರಪ್ರಪಂಚವನ್ನು ಅವರು ನಿರ್ಮಿಸಿದ್ದಾರೆ. ಹೊರಗಣ ಸಂಗತಿಗಳಿಗಿಂತ ಮನೋವ್ಯಾಪಾರಕ್ಕೇ ಪ್ರಾಶಸ್ತ್ಯ ನೀಡುವ ಕಾರಣದಿಂದ ಈ ಕಥೆಗಳು ಅನನ್ಯವೆನಿಸಿವೆ. ಒಮ್ಮೆ ಓದಿದಿರೆ ಮನಸ್ಸಿನ ಮೇಲೆ ಅಳಿಸಲಾಗದ ಮುದ್ರೆಯನ್ನೊತ್ತುವುದು ನಿಸ್ಸಂಶಯ. ಅಂತಹ ಆಯ್ದ ಹನ್ನೆರಡು ಕಥೆಗಳನ್ನು ಈ ಸಂಕಲನದಲ್ಲಿ ನೀಡಲಾಗಿದೆ ಎಂದು ಕೃತಿಯ ಕುರಿತು ಇಲ್ಲಿ ವಿವರಿಸಲಾಗಿದೆ.

About the Author

ಶ್ರೀನಿವಾಸ ವಿ. ಸುತ್ರಾವೆ
(30 March 1942)

ಶ್ರೀನಿವಾಸ ವಿ. ಸುತ್ರಾವೆ ಮೂಲತಃ ದಾವಣಗೆರೆಯವರು, ತಂದೆ ಎಸ್. ವೆಂಕಟಗಿರಿ ರಾವ್, ತಾಯಿ- ಎಸ್. ಶಾಂತಾಬಾಯಿ. ದಾವಣಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಡಿ.ಆರ್.ಎಂ ಕಾಲೇಜಿನಲ್ಲಿ ಪಿಯೂಸಿ ಪೂರ್ಣಗೊಳಿಸಿದರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ  ಪೂರ್ಣಗೊಳಿಸಿದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾದ ಅವರು  ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಉದುರುವ ಎಲೆಗಳು, ಚೆರಿ ತೋಟ, ಆಯ್ದ ರಷ್ಯನ್ ಕಥೆಗಳು, ಚೆಕಾಫನ ಎರಡು ನಾಟಕಗಳು, ಸಿಂಹ ಮತ್ತು ರತ್ನ ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.  ...

READ MORE

Related Books