‘ಮುಸ್ಲಿಮ್ ಸಬಲೀಕರಣ’ ಕೃತಿಯು ಕೆ.ವೈ ಅಬ್ದುಲ್ ಹಮೀದ್ ಅವರ ಅನುವಾದಿತ ಲೇಖನಗಳ ಸಂಕಲನವಾಗಿದೆ.ಇ.ಎಂ.ಅಬ್ದುಲ್ ರಹಮಾನ್ ಅವರು ಈ ಕೃತಿಯ ಮೂಲ ಕರ್ತೃ. ಜೀವಂತಿಕೆ ಹೊಂದಿದ ಒಂದು ಸಮುದಾಯದ ಅಸ್ತಿತ್ವ, ಅತಿ ಜಯಿಸುವಿಕೆ, ಅಭಿವೃದ್ಧಿ ಮೊದಲಾದವುಳಿಗಿಂತ ಅದರ ಗುರಿ ಸಬಲೀಕರಣವಾಗಿರಬೇಕು. ಏಕೆಂದರೆ ಇದು ಸಂಪೂಣ ಮರ್ತ್ತು ಸಮಗ್ರವಾದ ಬದಲಾವಣೆಯಾಗಿದೆ. ಸಮುದಾಯದ ಆಂತರಿಕ ಆತ್ಮವಿಶ್ವಾಸದ ತಳಹದಿಯಲ್ಲಿ, ಮುಂದಿರುವ ಅಡೆತಡೆಗಳನ್ನು ಸರಿಯಾಗಿ ಅರಿತು ಅದನ್ನು ನೀಗಿಸಿ ಭದ್ರವಾದ ಭವಿಷ್ಯದೆಡೆಗೆ ಮಾರ್ಗಸೂಚಿಯನ್ನು ರಚಿಸಲು ಸಾಧ್ಯವಾಗಬೇಕು. ಇಂಡಿಯಾದ ಮುಸ್ಲಿಮ್ ಸಮುದಾಯದ ಸಬಲೀಕರಣಕ್ಕೆ ರಾಷ್ಟ್ರದ ವಾಸ್ತವಿಕತೆ ಮತ್ತು ಇಸ್ಲಾಮಿಕ್ ಮೌಲ್ಯಗಳ ತಳಹದಿಯಲ್ಲಿ ಈ ಕೃತಿ ಬೆಳಕು ಚೆಲ್ಲುತ್ತದೆ.
©2025 Book Brahma Private Limited.