ಬಹುರೂಪ ಗಾಂಧಿ

Author : ಎಂ.ಜಿ. ಗಂಗನಪಳ್ಳಿ

Pages 152

₹ 120.00




Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

"ಬಹುರೂಪ ಗಾಂಧಿ" ಎಂಬುದು ಅನು ಬಂದೋಪಾಧ್ಯಾಯರು ಹಿಂದಿಯಲ್ಲಿ ರಚಿಸಿದ ಕೃತಿಯನ್ನು ಲೇಖಕ ಎಂ.ಜಿ. ಗಂಗನಪಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ಹೆಸರೇ ಸೂಚಿಸುವಂತೆ ಗಾಂಧಿಯನ್ನು ವಿವಿಧ ರೂಪಗಳಲ್ಲಿ ಕಂಡಿರುವ ವಿಶೇಷತೆ ಇದೆ. ಗಾಂಧೀಜಿಯವರನ್ನು ಭಿನ್ನ ವಿಭಿನ್ನ ಪಾತ್ರಗಳಲ್ಲಿ ಸೆರೆಹಿಡಿಯಲಾಗಿದೆ. ಗಾಂಧೀಜಿ ಅವರು ಜನಸಾಮಾನ್ಯರನ್ನು ದುಶ್ಚಟಗಳಿಂದ ದೂರವಿರಿಸಲು ಅವರ ಚಟಗಳ ಭಿಕ್ಷೆ ಕೇಳುತ್ತಿದ್ದರು. ಅದೇ ರೀತಿ, ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಅವರು ಧನಸಹಾಯದ ಭಿಕ್ಷೆ ಬೇಡಿದ್ದರು. ಇಂತಹ ಸಂಗತಿಗಳನ್ನು ವಿವರಿಸುವ ಕೃತಿ ಇದು.

About the Author

ಎಂ.ಜಿ. ಗಂಗನಪಳ್ಳಿ

ಕವಿ ಎಂ. ಜಿ. ಗಂಗನಪಳ್ಳಿಯವರು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರು. ರೆಡಿಯೋ ಚಿಂತನೆಗಳು, ಕವನಗಳು, ಶರಣ-ಸಂತರ-ಜೀವನ ವಿಚಾರಗಳ ಪುಸ್ತಕಗಳನ್ನು ರಚಿಸಿದ್ದಾರೆ. 2009ನಲ್ಲಿ ಗಡಿನಾಡು ಸಾಹಿತ್ಯ ಸಮ್ಮೇಳನ - 2010ರ ಸಾಲಿನಲ್ಲಿ ಬೀದರಿನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅರಣ್ಯ ಇಲಾಖೆಯ ಒಡನಾಡಿಯಾಗಿದ್ದ ಅವರು ಪರಿಸರ ಉಸಿರಾಡುವ ಗಾಳಿ, ಪ್ರಕೃತಿ- ಮಾನವನ ಸಂಬಂಧ ಅರಣ್ಯ ಬೆಳೆಸುವ ಹಾಗೂ ರಕ್ಷಿಸುವ ಕಳಕಳಿಯ ಕವನಗಳನ್ನು ಹಾಡಲು ಬರುವಂತೆ  ರಚಿಸಿದ್ದು, ಅರಣ್ಯ ಇಲಾಖೆಯು ಈ ಕವನಗಳ ಸಂಗ್ರಹ ‘ವನಸಿರಿ’ ಪ್ರಕಟಿಸಿದೆ. ಕೃತಿಗಳು: ವನಸಿರಿ (ಪರಿಸರ ಸಂಬಂಧಿ ಕವನ ಸಂಕಲನ), ವೃಕ್ಷಮಿತ್ರ (ಹೂ-ಬೇವು-ಆಲ, ಹೊಂಗೆ, ಬಸವನ ಪಾದ, ...

READ MORE

Related Books