ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ

Author : ಸಿ.ಬಿ. ಕಮತಿ

Pages 500

₹ 675.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಬಿಪಿನ್ ಚಂದ್ರ ಅವರ India"s struggle for independence ಕನ್ನಡಾನುವಾದ  `ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟವು’. ಕನ್ನಡಕ್ಕೆ ಸೊಗಸಾಗಿ ಮೂಲ ಕೃತಿಯಾಶಯಕ್ಕೆ ಧಕ್ಕೆಯಾಗದಂತೆ ಕನ್ನಡಕ್ಕೆ ತಂದಿದ್ದಾರೆ ಸಿ.ಬಿ. ಕಮತಿ. ಭಾರತೀಯ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಆಳವಾದ ಮತ್ತು ವಿವರವಾದ ಅವಲೋಕವನ್ನು ಈ ಕೃತಿ ನೀಡಲಿದ್ದು ಅದರ ಇತಿಹಾಸದ ಪ್ರಮುಖ ಭಾಗಗಳನ್ನು ತೆರೆದಿಡುತ್ತದೆ. ಒಂದೇ ಪ್ರದೇಶದ ಹೋರಾಟದ ಅನಾವರಣಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶದ ಸ್ವಾತಂತ್ರ್ಯದ ಹೆಜ್ಜೆಗುರುತನ್ನು ನೀಡುತ್ತದೆ. ಚಳವಳಿಯು ಜನರ ಮೇಲೆ ಬೀರಿದ ಪ್ರಭಾವವನ್ನು, ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ದಾಖಲಿಸಿರುವ ಇತಿಹಾಸದ ಕೃತಿಯಾಗಿದೆ. ಈ ಪುಸ್ತಕವು ಭಾರತೀಯ ಆಧುನಿಕ ಇತಿಹಾಸದ ವಿದ್ಯಾರ್ಥಿಗಳು, ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹಾಗೂ ಇತಿಹಾಸವನ್ನು ಪ್ರಮುಖ ವಿಷಯವಾಗಿ ಆಯ್ಕೆಮಾಡಿಕೊಂಡಿರುವ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ.

About the Author

ಸಿ.ಬಿ. ಕಮತಿ

ಕೆ.ಎಲ್.ಇ ಸಂಸ್ಥೆಯ ಲಿಂಗರಾಜ್‌ ಮಹಾವಿದ್ಯಾಲಯ ಬೆಳಗಾವಿಯಲ್ಲಿ ಇತಿಹಾಸ ಸಹ ಪ್ರಾಧ್ಯಾಪಕರಾಗಿರುವ ಸಿ.ಬಿ. ಕಮತಿ ಅವರು ವಿಭಾಗ ಮುಖ್ಯಸ್ಥರು ಕೂಡ ಹೌದು. ಸಿ.ಬಿ. ಕಮತಿ ಅವರು ಇತಿಹಾಸ ವಿಷಯದ ಕುರಿತು ಆರು ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರಮಟ್ಟದ ಇತಿಹಾಸ ಪ್ರಾಧ್ಯಾಪಕರ ವೃತ್ತಿಪರ ಸಂಘಟನೆಗಳ ಸದಸ್ಯರಾಗಿದ್ದಾರೆ. ಸ್ವಾತಂತ್ರ್ಯಾ ನಂತರ 2000 ಇಸವಿ ವರೆಗಿನ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ ಇತಿಹಾಸವನ್ನು ಚಿತ್ರಿಸುವ ಅನುವಾದಿತ ಕೃತಿ 'ಸ್ವಾತಂತ್ರ್ಯೋತ್ತರ ಭಾರತ’. ...

READ MORE

Related Books