ಖ್ಯಾತ ವಿದ್ವಾಂಸ ಡಾ. ಎಸ್. ಶಿವರಾಜಪ್ಪ ಅವರು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ -ಕಲ್ಹಣನ ರಾಜ ತರಂಗಿಣಿ. ಕಾಶ್ಮೀರದ ಬ್ರಾಹ್ಮಣ ಕಲ್ಹಣನಿಂದ 12ನೇ ಶತಮಾನದಲ್ಲಿ ಸಂಸ್ಕೃತದಲ್ಲಿ ಬರೆದ ಹಾಗೂ ವಾಯವ್ಯ ಭಾರತೀಯ ಉಪಖಂಡದ, ವಿಶೇಷವಾಗಿ ಕಾಶ್ಮೀರದ ರಾಜರ ಬಗ್ಗೆ ಬರೆದ ಒಂದು ಛಂದೋಬದ್ಧ ಐತಿಹಾಸಿಕ ಕಾಲಾನುಕ್ರಮ. ರಾಜತರಂಗಿಣಿ ಕೇವಲ ರಾಜರ ಪಟ್ಟಿಯಲ್ಲ; ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಆಕರ. ರಾಜಾಸ್ಥಾನದವರ ದೃಷ್ಟಿಕೋನದಿಂದ ಬರೆದ ರಚನೆಯಾದರೂ ಮಧ್ಯಯುಗದಲ್ಲಿ ಭಾರತ ಜನತೆಯ ಜೀವನಸ್ವರೂಪವನ್ನು ಅರಿಯಲು ಸಹಾಯಕವಾಗಿದೆ.
©2024 Book Brahma Private Limited.