ಜಿ.ಅಲೋಶಿಯಸ್ ಅವರು ಸಂಫಾದಿಸಿರುವ ಕೃತಿಯನ್ನು ಲೇಖಕ ಬಿ. ಸುಜ್ಞಾನಮೂರ್ತಿ ಪೆರಿಯಾರ್ ನೋಟದಲ್ಲಿ ಇಸ್ಲಾಂ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪೆರಿಯಾರ್ ಹೆಸರು ಕೇಳಿದ ಕೂಡಲೆ ಮಂದಿಗೆ ಒಬ್ಬ ಜಿಡ್ಡು ಗಟ್ಟಿದ ನಾಸ್ತಿಕ ಎಂಬ ಚಿಂತನೆ ಹುಟ್ಟುತ್ತದೆ. ಆದರೆ ಅವರು ದೇವರನ್ನು ನಂಬದ ಮಾತು, ವಿಶೇಷವಾಗಿ ಬಗೆಬಗೆಯ ರೂಪಗಳಲ್ಲಿ ಅಸಂಖ್ಯಾತವಾಗಿರುವ ಹಿಂದೂ ದೇವರುಗಳನ್ನು ಅಸಹ್ಯಪಟ್ಟುಕೊಂಡ ಮಾತು ನಿಜವೇ ಆದರೂ ಪೆರಿಯಾರ್ ಗುರಿ ನಾಸ್ತಿಕತೆಯ ಪ್ರಚಾರ ಅಲ್ಲವೇ ಅಲ್ಲ. ಈ ದೇಶದ ಜನರಲ್ಲಿ ಆತ್ಮಗೌರವವನ್ನು ಬೆಳೆಸುವುದಾಗಿತ್ತು.ಪೆರಿಯಾರ್ ಅವರ ಕುರಿತ ಲೇಖನ ಈ ಕೃತಿಯ ಜೀವಾಳ.
©2025 Book Brahma Private Limited.