ಕೋಮುವಾರು ಸಮಸ್ಯೆ

Author : ಈಶ್ವರಚಂದ್ರ

Pages 213

₹ 65.00




Published by: ನ್ಯಾಷನಲ್ ಬುಕ್ ಟ್ರಸ್ಟ್
Address: ಬೆಂಗಳೂರು

Synopsys

‘ಕೋಮುವಾರು ಸಮಸ್ಯೆ’ ಕೃತಿಯು ಈಶ್ವರಚಂದ್ರ ಅವರ ಅನುವಾದಿತ ಲೇಖನಸಂಕಲನವಾಗಿದೆ. 1931 ರಲ್ಲಿ ಮಾರ್ಚನಲ್ಲಿ ಕಾನ್ಪುರದಲ್ಲಿ ನಡೆದ ಗಲಭೆಯನ್ನು ಕುರಿತು ವಿಚಾರಣೆ ನಡೆಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸ್ ನಿಂದ ಕರಾಚಿ ಅಧಿವೇಶನ 1931 ನೇಮಿತವಾದ ಸಮಿತಿಯ ವರದಿ ಪುಸ್ತಕ ರೂಪದ ಕನ್ನಡ ಆವೃತಿ ಈ ಕೃತಿಯಾಗಿದೆ. ಕಾನ್ಪುರ ವಿಚಾರಣಾ ಸಮಿತಿಯ ಕಾರ್ಯದರ್ಶಿ ಸುಂದರಲಾಲ ಅವರು 1933ರಲ್ಲಿ ಇದನ್ನು ಕನ್ನಡದಲ್ಲಿ ಮೊದಲು ಪ್ರಕಟಿಸಿದ್ದರು. ಅವರ ಅಭಿಪ್ರಾಯದಂತೆ : ಈ ವರದಿಯನ್ನು ಸಕಾಲದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಿಗೆ ಅಕ್ಟೋಬರ್ 1931ರಲ್ಲಿ ಸಲ್ಲಿಸಲಾಯಿತು. ಅಖಿಲ ಭಾರತ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಅನುಷ್ಠಾನಕ್ಕೆ ತರಲು ಮತ್ತು ಸರ್ವಕಾಲಿಕವಾದ ಆಸಕ್ತಿ ಮೌಲ್ಯಗಳಾದ ಐತಿಹಾಸಿಕ-ಕಾರಣಗಳು ಮತ್ತು ಕಾರ್ಯಸಾದುವಾದ ಪರಿಹಾರೋಪಾಯಗಳನ್ನು ಕುರಿತು ಈ ವರದಿಯು ಚರ್ಚಿಸುತ್ತದೆ.

About the Author

ಈಶ್ವರಚಂದ್ರ
(14 July 1946)

ಕನ್ನಡದ ಪ್ರಸಿದ್ಧ ಕಥೆಗಾರ ಈಶ್ವರಚಂದ್ರರು ಜುಲೈ 14, 1946ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೋದಿಗೆರಿಯಲ್ಲಿ ಜನಿಸಿದರು. ತಂದೆ ಎಚ್.ಎನ್. ರಾಮರಾವ್ ಅವರು ಮತ್ತು ತಾಯಿ ಪದ್ಮಾವತಮ್ಮನವರು. ಈಶ್ವರ ಚಂದ್ರರ ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗಗಳಲ್ಲಿ ನಡೆದವು. ಮುಂದೆ ಭದ್ರಾವತಿಯಲ್ಲಿ ಡಿಪ್ಲೊಮಾ ಪೂರೈಸಿದ ಅವರು ಬೆಂಗಳೂರು ವಿಮಾನ ಕಾರ್ಖಾನೆಯ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರವನ್ನು ಸೇರಿ ನಲವತ್ತು ವರ್ಷಗಳ ಸುದೀರ್ಘಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು ತಳೆದ ಈಶ್ವರಚಂದ್ರರು ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ ಪಡೆದರು. ...

READ MORE

Related Books