ಭಾರತದಲ್ಲೊಂದು ಸುಂಕದ ಬೇಲಿ

Author : ಎಸ್. ನರೇಂದ್ರಕುಮಾರ್

Pages 280

₹ 125.00




Year of Publication: 2013
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.

Synopsys

`ಭಾರತದಲ್ಲೊಂದು ಸುಂಕದ ಬೇಲಿ' ಇತಿಹಾಸ ಬರಹದ ಪುಸ್ತಕವಿದು. ಲೇಖಕ ರಾಯ್‌ ಮ್ಯಾಕ್ಸ್ಹಾಮ್‌ ರಚಿಸಿದ್ದಾರೆ. ಈ ಪುಸ್ತಕದ ಕನ್ನಡನುವಾದವನ್ನು ಲೇಖಕ ಎಸ್.‌ ನರೇಂದ್ರಕುಮಾರ್‌ ಮಾಡಿದ್ದಾರೆ. ಸುಮಾರು ಮೂರೂವರೆ ಶತಮಾನಗಳಷ್ಟು ದೀರ್ಘಕಾಲ ಭಾರತದಲ್ಲಿದ್ದ ಬ್ರಿಟಿಷರು ತಾವಿದ್ದಷ್ಟೂ ಕಾಲವೂ ಬಗೆಬಗೆಯಾಗಿ ಇಲ್ಲಿಯ ಸಂಪತ್ತನ್ನು ಕೊಳ್ಳೆ ಹೊಡೆದರು. ಬ್ರಿಟನ್ನಿನ ಅಂದಿನ ವೈಭವವೆಲ್ಲ ಭಾರತೀಯರ ಬೆವರಿನ ಫಲ; ಆ ವಿಲಾಸ-ವೈಭೋಗಗಳಿಗೆ ರಂಗುತುಂಬಿದ್ದು ಬ್ರಿಟಿಷರು ಹೀರಿದ ಭಾರತೀಯರ ರಕ್ತ! ಬ್ರಿಟಿಷರು ಭಾರತೀಯರನ್ನು ದೋಚುವುದಕ್ಕಾಗಿಯೇ ಅನೇಕ ಕಾನೂನುಗಳನ್ನು ಜಾರಿಗೊಳಿಸಿದರು; ವಿವಿಧ ಬಗೆಯ ತೆರಿಗೆಗಳನ್ನು ವಿಧಿಸಿದರು. ದಿನಬಳಕೆಯ ಅಗತ್ಯವಸ್ತುವಾದ ಉಪ್ಪಿನ ಮೇಲೂ ಸುಂಕ ಹೇರಿದರು; ಉಪ್ಪಿನ ಸಾಗಾಟವನ್ನು ನಿರ್ಬಂಧಿಸಿದರು. ಉಪ್ಪಿನ ಸಾಗಾಟದ ಮೇಲೆ ಹದ್ದಿನ ಕಣ್ಣಿಡಲು ನಿರ್ದಾಕ್ಷಿಣ್ಯವಾಗಿ ಕಂದಾಯ ವಸೂಲಿ ಮಾಡಲು; ದಕ್ಷಿಣ ಮತ್ತು ಪಶ್ಚಿಮ ಭಾರತದಿಂದ ಪೂರ್ವೋತ್ತರ ಭಾರತಕ್ಕೆ ಉಪ್ಪಿನ ಮುಕ್ತ ಸಾಗಾಟ ನಡೆಯುವುದನ್ನು ತಪ್ಪಿಸಲು ಮುಳ್ಳುಕಂಟಿಗಳಿಂದ ದಟ್ಟ ಪೊದೆಗಳಿಂದ ಕೂಡಿದ 2500 ಮೈಲು ಉದ್ದದ ಸುಂಕದ ಬೇಲಿಯನ್ನು ರೂಪಿಸಿದರು. ಈ ಬೇಲಿಯ ಇಕ್ಕೆಲಗಳಲ್ಲಿ ಕಾವಲಿಗೆಂದು ಸುಮಾರು ಹನ್ನೆರಡು ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಇಂಥದ್ದೊಂದು ಬೃಹತ್ತಾದ ಬೇಲಿಯ ಜಾಡುಹಿಡಿದು ಹೊರಟ ಬ್ರಿಟಿಷ್ ಪ್ರಜೆ ರಾಯ್ ಮ್ಯಾಕ್ಸ್‌ಹ್ಯಾಮ್ ದಾಖಲಿಸಿದ ಅಪೂರ್ವ ಅನುಭವಗಳ ಸಂಗ್ರಹ ರೂಪ ’ಭಾರತದಲ್ಲೊಂದು ಸುಂಕದ ಬೇಲಿ’ ಎಂದು ಈ ಕೃತಿಯ ಕುರಿತು ಇಲ್ಲಿ ವಿವರಿಸಲಾಗಿದೆ.

About the Author

ಎಸ್. ನರೇಂದ್ರಕುಮಾರ್
(22 December 1973)

ಡಾ. ಎಸ್. ನರೇಂದ್ರಕುಮಾರ ಅವರು ಚಾಮನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗಹಳ್ಳಿ (ಜನನ: 22-12-1973) ಗ್ರಾಮದವರು ತಂದೆ ಶ್ರೀನಿವಾಸಮೂರ್ತಿ, ತಾಯಿ ಮಾಲತಿ. ಪ್ರಸ್ತುತ ಇವರು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ  ಸಂಯೋಜನಾಧಿಕಾರಿಯಾಗಿದ್ದಾರೆ. "ದೇವನೂರು, ನಾಗವಾರ, ಕುಂವೀ ಅವರ ಕಥೆಗಳು ಒಂದು ಅಧ್ಯಯನ" ಇವರ ಪಿಎಚ್.ಡಿ ಪ್ರಬಂಧ. ಕೃತಿಗಳು: ಹೊಸ ಸಮಾಜ ಮತ್ತು ಅಂಬೇಡ್ಕರ್ ( ಅಂಬೇಡ್ಕರ್ ಚಿಂತನೆಗಳ ವಿಮರ್ಶಾ ಲೇಖನಗಳು), ನಿಜದ ನೆಲೆ (ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಲೇಖನಗಳು), ಬೋಧಿನೆಲದ ಮಾತು (ಸಾಹಿತ್ಯ, ವೈಚಾರಿಕ, ಸಾಂಸ್ಕೃತಿಕ, ಸಮಕಾಲೀನ ವಿಚಾರಗಳ ಲೇಖನಗಳು), ದಸಂಸ ಹೋರಾಟದ ಪಯಣ ( ಮೈಸೂರು ...

READ MORE

Related Books