ಸಾಹಿತಿ ನಾ. ದಿವಾಕರ ಅವರ ಕೃತಿ-ಗೋವು ಪವಿತ್ರ ಎಂಬ ಮಿಥ್ಯೆ. ಅನಾದಿ ಕಾಲದಿಂದಲೂ ಮನುಷ್ಯ ಗೋವುಗಳನ್ನು ಕೃಷಿಗಾಗಿ, ಆಹಾರಕ್ಕಾಗಿ ಬಳಸಿದ್ದು ನಮಗೆ ಇತಿಹಾಸ ತಿಳೀಸುತ್ತದೆ. ಆದರೆ, ಒಂದು ವರ್ಗ ಮಾತ್ರ ಗೋವುಗಳು ಪವಿತ್ರ ಎಂದು ಹೇಳುವ ಮೂಲಕ ಬಹುತೇಕ ವರ್ಗದ ಜನರ ಆಹಾರವನ್ನು ಕಸಿಯುತ್ತಿದ್ದಾರೆ. ಮಾತ್ರವಲ್ಲ; ಗೋವುಗಳ ಹೆಸರಿನಲ್ಲಿ ಜನಸಾಮಾನ್ಯರ ಶೋಷಣೆಯೂ ನಡೆಯುತ್ತಿದೆ. ಈ ಎಲ್ಲ ವಿದ್ಯಮಾನದ ವಿರುದ್ಧ ಐತಿಹಾಸಿಕ ಸಾಕ್ಷ್ಯಾಧಾರಗಳ ಸಮೇತ ಬರೆದ ಚಿಂಥನೆಗಳು ಇಲ್ಲಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಗೋಮಾಂಸ ಸೇವನೆ ಹಾಗೂ ಅಸ್ಪೃರ್ಶಯತೆ ಕುರಿತು ವ್ಯಕ್ತಪಡಿಸಿದ ವಿಚಾರಗಳ ಲೇಖನಗಳೂ ಈ ಕೃತಿಯಲ್ಲಿ ಒಳಗೊಂಡಿವೆ.ಡಿ.ಎನ್. ಝಾ ಅವರು ಮೂಲ ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ನಾ. ದಿವಾಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.