ಪತ್ರಕರ್ತ ರವಿ ಬೆಳಗೆರೆ ಅವರ ಅನುವಾದಿತ ಕೃತಿ-ಪ್ರಮೋದ್ ಮಹಾಜನ್ ಹತ್ಯೆ. ಪ್ರವೀಣ ಮಹಾಜನ್ ಅವರು ಮೂಲ ಮರಾಠಿಯಲ್ಲಿ ರಚಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಯಂತಹ ಉನ್ನತ ಸ್ಥಾನಗಳನ್ನು ನಿರ್ವಹಿಸಿದ ಹಾಗೂ ನಾಯಕ ವ್ಯಕ್ತಿತ್ವದ ಮಹಾರಾಷ್ಟ್ರದ ನಾಯಕ ಪ್ರಮೋದ್ ಮಹಾಜನ್ ಅವರ ಹತ್ಯೆಯನ್ನು ಅವರ ಸಹೋದರನೇ ಗುಂಡಿಕ್ಕಿ ಕೊಂದ ಘಟನೆಗೆ ಸಂಬಂಧಿಸಿದಂತೆ ವಿವರಗಳ ಸಂಗ್ರಹ ಕೃತಿ ಇದು. ಹತ್ಯೆಯ ಘಟನೆ ದೇಶದೆಲ್ಲೆಡೆ ಸಂಚಲನಗೊಳಿಸಿತ್ತು. ಸಹೋದರರಿಬ್ಬರ ಮಧ್ಯೆ ಇದ್ದ ವೈಮನಸ್ಸು ಈ ಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದ್ದರೂ ಇನ್ನಿತರೆ ವಿಭಿನ್ನ ಕಾರಣಗಳನ್ನು ಗುರುತಿಸಿ, ಸತ್ಯ ಹೇಳಲು ಹವಣಿಸುವ ಪ್ರಯತ್ನದ ಭಾಗವಾಗಿ ವರದಿ ರೂಪದ ಲೇಖನವನ್ನು ಇಲ್ಲಿ ಕಾಣಬಹುದು.
©2025 Book Brahma Private Limited.