ಆಂಗ್ಲ ಲೇಖಕ ಡೇಲ್ ಕಾರ್ನಗಿ ಅವರ ಕೃತಿಯನ್ನು (ಹೌ ಟು ವಿನ್ ಫ್ರೆಂಡ್ಸ್ ಆಂಡ್ ಇನ್ ಫ್ಲುಯೆನ್ಸ್ ಪೀಪಲ್) ಲೇಖಕ ಟಿ.ಎನ್. ಜಯಕೃಷ್ಣ ಅವರು ‘ಯಶಸ್ವಿ ಬದುಕಿಗೆ ರಾಜಮಾರ್ಗ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಲಕ್ಷಾಂತರ ಗೆಳೆಯರನ್ನು ಸಂಪಾದಿಸುವುದು ಹೇಗೆ?, ಜನರ ಮೆಚ್ಚುಗೆ ಗಳಿಸುವುದು ಹೇಗೆ? ಇತರರ ಮನವೊಲಿಸುವುದು ಹೇಗೆ? ಪ್ರಭಾವಿ ನಾಯಕನಾಗುವುದು ಹೇಗೆ? ಇತ್ಯಾದಿ ಪ್ರೇರಣಾತ್ಮಕ ಅಂಶಗಳತ್ತ ಓದುಗರ ಗಮನ ಸೆಳೆಯುವುದು ಈ ಕೃತಿಯ ಉದ್ದೇಶ.
©2025 Book Brahma Private Limited.